ಲಂಡನ್: ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ತಂಡದ 20 ಆಟಗಾರರು ಮತ್ತು 11 ನಿರ್ವಹಣಾ ಸಿಬ್ಬಂದಿ ಕೋವಿಡ್ ಪರೀಕ್ಷೆ ನಡೆಸಿದ್ದು, ಅವರ ವರದಿ ನೆಗೆಟಿವ್ ಬಂದಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮಂಗಳವಾರ ಪ್ರಕಟಿಸಿದೆ.
ಸೋಮವಾರ ಇಂಗ್ಲೆಂಡ್ ಆಟಗಾರರ ಕೊನೆಯ ಕೋವಿಡ್ ಪರೀಕ್ಷೆ ನಡೆಸಿದ್ದು, ವರದಿ ನಕಾರಾತ್ಮಕವಾಗಿದೆ ಎಂದು ಇಸಿಬಿ ದೃಢಪಡಿಸಿದೆ. ಇಲ್ಲಿಯವರಿಗೆ, ಇಸಿಬಿ ತಮ್ಮ ಆಟಗಾರರು ಮತ್ತು ಸಿಬ್ಬಂದಿಯನ್ನ ಮೂರು ಬಾರಿ ಪರೀಕ್ಷೆ ಮಾಡಿ ಕೊರೊನಾ ಇಲ್ಲದಿರುವುದನ್ನ ಖಚಿತ ಪಡಿಸಿಕೊಂಡಿದೆ.
ಜೂನ್ 26ರಂದು ನಡೆದ ಮೊದಲ ನಕಾರಾತ್ಮಕ ಪರೀಕ್ಷೆ ನಂತರ ಎಲ್ಲ ಆರು ಆಟಗಾರರನ್ನು ಸೋಮವಾರ ಮರು ಪರೀಕ್ಷಿಸಲಾಗಿದೆ ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಇತರ ನಾಲ್ಕು ಆಟಗಾರರಾದ ಇಮ್ರಾನ್ ಖಾನ್, ಕಾಶಿಫ್ ಭಟ್ಟಿ, ಹೈದರ್ ಅಲಿ ಮತ್ತು ಹ್ಯಾರಿಸ್ ರೌಫ್ ಅವರ ಮಾದರಿಗಳ ಇತ್ತೀಚಿನ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿದೆ. ಅವರ ವರದಿ ಇನ್ನೂ ಎರಡು ಬಾರಿ ನೆಗೆಟಿವ್ ಬರುವವರೆಗೂ ಪಾಕಿಸ್ತಾನದಲ್ಲಿಯೇ ಇರುತ್ತಾರೆ ಎಂದು ಪಿಸಿಬಿ ಸ್ಪಷ್ಟಪಡಿಸಿದೆ.
ಆರಂಭದಲ್ಲಿ ಹತ್ತರಲ್ಲಿ ಈ ನಾಲ್ವರು ಆಟಗಾರರ ವರದಿ ಪಾಸಿಟಿವ್ ಬಂದಿದ್ದು, ಸತತ ಎರಡು ಬಾರಿ ಪರೀಕ್ಷೆಯಲ್ಲಿ ನೆಗೆಟಿವ್ ಬರುವವರೆಗೂ ಇಂಗ್ಲೆಂಡ್‌ಗೆ ಪ್ರಯಾಣಿಸಲು ಅನುಮತಿಸುವುದಿಲ್ಲ ಎಂದು ಪಿಸಿಬಿ ಹೇಳಿದೆ.