ಕರಾಚಿ:ಪಾಕ್ನಲ್ಲೂ ಕೊರೊನಾ ಅಬ್ಬರ ಜೋರಾಗಿದ್ದು, ಇದೀಗ ಅಲ್ಲಿನ ಮೂವರು ಅಂತಾರಾಷ್ಟ್ರೀಯ ಕ್ರಿಕೆಟ್ ಪ್ಲೇಯರ್ಸ್ಗೆ ಯಾವುದೇ ಲಕ್ಷಣ ಕಾಣದೆ ಕೋವಿಡ್ ಮಹಾಮಾರಿ ವಕ್ಕರಿಸಿರುವುದು ಖಚಿತಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಪಾಕ್ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದ್ದು, ಪ್ರಕಟಣೆ ಹೊರಡಿಸಿದೆ.
ಯಾವುದೇ ಲಕ್ಷಣಗಳಿಲ್ಲದೆ ಪಾಕ್ನ ಮೂವರು ಕ್ರಿಕೆಟಿಗರಿಗೆ ಕೊರೊನಾ... ಖಚಿತಪಡಿಸಿದ ಪಿಸಿಬಿ!
ಇಂಗ್ಲೆಂಡ್ ಪ್ರವಾಸ ಕೈಗೊಳ್ಳಬೇಕಾಗಿದ್ದ ಪಾಕ್ ಕ್ರಿಕೆಟ್ ತಂಡದ ಮೂವರಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದ್ದು, ತಕ್ಷಣದಿಂದಲೇ ಹೋಂ ಕ್ವಾರಂಟೈನ್ಗೊಳಗಾಗುವಂತೆ ಪಿಸಿಬಿ ಸೂಚನೆ ನೀಡಿದೆ.
ತಂಡದ ಹೈದರ್ ಅಲಿ, ಹ್ಯಾರಿಸ್ ರೌಫ್ ಹಾಗೂ ಶಾಬಾದ್ ಖಾನ್ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇವರಿಗೆ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದೆ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಇಂಗ್ಲೆಂಡ್ ವಿರುದ್ಧದ ಟೂರ್ನಿಗಾಗಿ ಪ್ರವಾಸ ಬೆಳೆಸಬೇಕಾಗಿದ್ದ ತಂಡದಲ್ಲಿ ಈ ಪ್ಲೇಯರ್ಸ್ ಕೂಡ ಇದ್ದರು. ತಕ್ಷಣದಿಂದಲೇ ಹೋಂ ಕ್ವಾರಂಟೈನ್ಗೊಳಗಾಗುವಂತೆ ಪಾಕ್ ಕ್ರಿಕೆಟ್ ಮಂಡಳಿ ಇವರಿಗೆ ಸೂಚನೆ ನೀಡಿದೆ.
ಇವರ ಜತೆ ಟೆಸ್ಟ್ಗೆ ಒಳಗಾಗಿದ್ದ ಇಮಾದ್ ವಾಸೀಂ ಹಾಗೂ ಉಸ್ಮಾನ್ ಶೈನ್ವಾರಿಗೆ ಕೋವಿಡ್ ನೆಗೆಟಿವ್ ಬಂದಿದೆ. ಪಾಕ್ ತಂಡ ಜೂನ್ 24ರಂದು ಲಂಡನ್ ಪ್ರವಾಸ ಕೈಗೊಳ್ಳಲಿದೆ. ಈಗಾಗಲೇ ಪಾಕ್ನ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿಗೆ ಕೊರೊನಾ ಕೊರೊನಾ ಇರುವುದು ಕನ್ಫರ್ಮ್ ಆಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.