ರಾವಲ್ಪಿಂಡಿ: ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ತಂಡ ಇಂದು ನಡೆದ 2ನೇ ಟಿ20 ಪಂದ್ಯದಲ್ಲಿ ಗೆಲ್ಲುವ ಮೂಲಕ ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಪಡೆದ ವಿಶ್ವದಾಖಲೆಗೆ ಪಾತ್ರವಾಗಿದೆ.
ಟಿ20 ಕ್ರಿಕೆಟ್ನಲ್ಲಿ ಒಂದೇ ತಂಡದ ವಿರುದ್ಧ ಸತತ ಜಯ: ವಿಶ್ವದಾಖಲೆ ಬರೆದ ಪಾಕ್ ತಂಡ
ಪಾಕಿಸ್ತಾನ ತಂಡ 2010ರಿಂದ 2020ರ ಹತ್ತು ವರ್ಷಗಳಲ್ಲಿ ಜಿಂಬಾಬ್ವೆ ವಿರುದ್ಧ 13 ಪಂದ್ಯಗಳನ್ನಾಡಿದ್ದು ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಈ ಮೂಲಕ ಒಂದೇ ತಂಡದ ವಿರುದ್ಧ ಸತತ ಹೆಚ್ಚು ಪಂದ್ಯ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.
ಪಾಕಿಸ್ತಾನ ತಂಡ 2010ರಿಂದ 2020ರ ಹತ್ತು ವರ್ಷಗಳಲ್ಲಿ ಜಿಂಬಾಬ್ವೆ ವಿರುದ್ಧ 13 ಪಂದ್ಯಗಳನ್ನಾಡಿದ್ದು ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಈ ಮೂಲಕ ಒಂದೇ ತಂಡದ ವಿರುದ್ಧ ಸತತ 13 ಪಂದ್ಯ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.
ಪಾಕಿಸ್ತಾನವನ್ನು ಹೊರೆತುಪಡಿಸಿದರೆ, ಅಫ್ಘಾನಿಸ್ತಾನ ಐರ್ಲೆಂಡ್ ವಿರುದ್ಧ 2017ರಿಂದ 20ರವರೆಗೆ ಸತತ12 ಪಂದ್ಯ ಜಯಿಸಿ 2ನೇ ಸ್ಥಾನದಲ್ಲಿದೆ. ಭಾರತ ತಂಡ ಜಿಂಬಾಬ್ವೆ ವಿರುದ್ಧ 2009ರಿಂದ 2018ರವರೆಗೆ ಸತತ 8 ಜಯ, ಅಫ್ಘಾನ್ 2015 ರಿಂದ -19ರವರೆಗೆ 8ಜಯಗಳಿಸಿ ನಂತರದ ಸ್ಥಾನದಲ್ಲಿದೆ. ಇನ್ನು ಭಾರತ ತಂಡ ಶ್ರೀಲಂಕಾ, ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಸತತ 7 ಪಂದ್ಯಗಳನ್ನು ಸೋಲಿಲ್ಲದೆ ಗೆದ್ದಿರುವ ದಾಖಲೆಯನ್ನು ಹೊಂದಿದೆ.