ಕರ್ನಾಟಕ

karnataka

ETV Bharat / sports

ಟೆಸ್ಟ್​ನಲ್ಲಿ 6000 ರನ್​ ಗಡಿ ದಾಟಿದ ಪಾಕಿಸ್ತಾನ ತಂಡದ ನಾಯಕ ಅಜರ್ ಅಲಿ

ಸೌತಾಂಪ್ಟನ್​ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್​ನಲ್ಲಿ ಏಕಾಂಗಿ ಹೋರಾಟ ನಡೆಸಿದ ಅಜರ್​ ಔಟಾಗದೆ 141 ರನ್​ಗಳಿಸಿದ್ದರು. ಆದರೆ ಬೇರೆ ಬ್ಯಾಟ್ಸ್​ಮನ್​ಗಳು ವಿಫಲವಾಗಿದ್ದರಿಂದ 273 ರನ್​ಗಳಿಗೆ ಆಲೌಟ್​ ಆಗಿ ಇನ್ನು 2 ದಿನಗಳ ಆಟ ಬಾಕಿ ಉಳಿದಿರುವಂತೆ ಫಾಲೋ ಆನ್​ಗೆ ಗುರಿಯಾಗಿದೆ.

ಅಜರ್ ಅಲಿ 6000 ರನ್​
ಅಜರ್ ಅಲಿ 6000 ರನ್​

By

Published : Aug 24, 2020, 3:29 PM IST

ಸೌತಾಂಪ್ಟನ್​:ಪಾಕಿಸ್ತಾನ ಟೆಸ್ಟ್​ ತಂಡದ ನಾಯಕ ಅಜರ್​ ಅಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಮಹತ್ವದ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಆಕರ್ಷಕ ಶತಕ ದಾಖಲಿಸಿದ್ದ ಅವರು ರೆಡ್​ಬಾಲ್​ ಕ್ರಿಕೆಟ್​ನಲ್ಲಿ 6 ಸಾವಿರ ರನ್​ ಪೂರೈಸಿದ ಪಾಕಿಸ್ತಾನದ 5ನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ಸೌತಾಂಪ್ಟನ್​ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್​ನಲ್ಲಿ ಏಕಾಂಗಿ ಹೋರಾಟ ನಡೆಸಿದ ಅಜರ್​ ಔಟಾಗದೆ 141 ರನ್​ಗಳಿಸಿದ್ದರು. ಆದರೆ ಬೇರೆ ಬ್ಯಾಟ್ಸ್​ಮನ್​ಗಳು ವಿಫಲವಾಗಿದ್ದರಿಂದ 273 ರನ್​ಗಳಿಗೆ ಆಲೌಟ್​ ಆಗಿ ಇನ್ನು 2 ದಿನಗಳ ಆಟ ಬಾಕಿ ಉಳಿದಿರುವಂತೆ ಫಾಲೋ ಆನ್​ಗೆ ಗುರಿಯಾಗಿದೆ.

ಅಜರ್​ ಅಲಿ ಭಾನುವಾರ 43 ರನ್​ಗಳಿಸುತ್ತಿದ್ದಂತೆ ಟೆಸ್ಟ್​ ಕ್ರಿಕೆಟ್​ನಲ್ಲಿ 6000 ರನ್​ ಪೂರೈಸಿದರು. ಈ ಮೂಲಕ ಈ ಸಾಧನೆ ಮಾಡಿದ ಪಾಕಿಸ್ತಾನ 5ನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು. ಅಜರ್​ 81 ಟೆಸ್ಟ್​ ಪಂದ್ಯಗಳಿಂದ 6098 ರನ್​ಗಳಿಸಿದ್ದಾರೆ. ಇದರಲ್ಲಿ 17 ಶತಕ ಮತ್ತು 31 ಅರ್ಧಶಕ ಸೇರಿದೆ. 302 ರನ್​ ಇವರ ಗರಿಷ್ಠ ಸ್ಕೋರ್​ ಆಗಿದೆ.

ಪಾಕಿಸ್ತಾನ ಪರ 6000 ರನ್​ಗಳಿಸಿದವರು

  • ಯೂನಿಸ್​ ಖಾನ್​-10099
  • ಜಾವೇದ್​ ಮಿಯಂದಾದ್​- 8832
  • ಇಂಜಮಾಮ್ ಉಲ್​ ಹಕ್​- 8829
  • ಮೊಹಮ್ಮದ್​ ಯೂಸುಫ್​- 7530
  • ಅಜರ್​ ಅಲಿ - 6098

ABOUT THE AUTHOR

...view details