ಕರ್ನಾಟಕ

karnataka

ETV Bharat / sports

ಭಾರತೀಯ ಯುವತಿಯನ್ನು ವರಿಸುತ್ತಿರುವ ಪಾಕ್​​​ ಕ್ರಿಕೆಟಿಗ! - ಪಾಕಿಸ್ತಾನ ವೇಗದ ಬೌಲರ್ ಹಸನ್ ಅಲಿ

ಇಂದು ದುಬೈನಲ್ಲಿ ಸರಳ ನಿಖಾ ಸಮಾರಂಭ ನಡೆಯಲಿದ್ದು, ಕುಟುಂಬಸ್ಥರು ಹಾಗೂ ಅತ್ಯಾಪ್ತರಷ್ಟೇ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಬೌಲರ್ ಹಸನ್ ಅಲಿ

By

Published : Aug 20, 2019, 3:02 PM IST

ದುಬೈ: ಪಾಕಿಸ್ತಾನ ತಂಡದ ವೇಗದ ಬೌಲರ್ ಹಸನ್ ಅಲಿ ಇಂದು ಭಾರತೀಯ ಮೂಲದ ಶಾಮಿಯಾ ಅರ್ಜೂರನ್ನು ದುಬೈನಲ್ಲಿ ವರಿಸಲಿದ್ದಾರೆ.

ಹಸನ್​ ಅಲಿ ಭಾರತೀಯ ಮೂಲದ ಯುವತಿಯನ್ನು ಮದುವೆಯಾಗಲಿದ್ದಾರೆ ಎನ್ನುವ ವಿಚಾರ ಕಳೆದ ಒಂದು ತಿಂಗಳಿನಿಂದ ದೊಡ್ಡ ಸುದ್ದಿ ಮಾಡುತ್ತಿದೆ.

ಪಾಕ್ ವೇಗದ ಬೌಲರ್ ಹಸನ್ ಅಲಿ

ಶಾಮಿಯಾ ಅರ್ಜೂ ಹರಿಯಾಣದ ಮೆವಾಟ್​​ನಲ್ಲಿ ವಾಸಿಸುತ್ತಿದ್ದು, ದುಬೈನಲ್ಲಿ ಇಬ್ಬರೂ ಭೇಟಿಯಾಗಿ ಪರಿಚಯವಾಗಿದೆ. ಶಾಮಿಯಾಳ ಸರಳ ಗುಣವನ್ನು ಮೆಚ್ಚಿರುವ ಪಾಕ್ ಬೌಲರ್​ ಆಕೆಗೆ ಮನಸೋತು ಮದುವೆಯಾಗುತ್ತಿದ್ದಾನೆ.

ಇಂದು ದುಬೈನಲ್ಲಿ ಸರಳ ನಿಖಾ ಸಮಾರಂಭ ನಡೆಯಲಿದ್ದು, ಕುಟುಂಬಸ್ಥರು ಹಾಗೂ ಅತ್ಯಾಪ್ತರಷ್ಟೇ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details