ಕರ್ನಾಟಕ

karnataka

ETV Bharat / sports

ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಪಾಕಿಸ್ತಾನ.. - ಟಿ20 ಕ್ರಿಕೆಟ್​

130 ರನ್​ಗಳ ಸಾಧಾರಣ ಮೊತ್ತ ಬೆನ್ನತ್ತಿದ ಪಾಕಿಸ್ತಾನ್​, 15.2 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು ಗುರಿ ತಲುಪಿತು. ಫಾಖರ್ ಝಮಾನ್ 21, ಹೈದರ್ ಅಲಿ 27, ಅದ್ಭುಲ್ಲಾ ಸಫೀಕ್ ಅಜೇಯ 41, ಖುಶ್ದಿಲ್ ಶಾ ಅಜೇಯ 36 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು..

ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಪಾಕಿಸ್ತಾನ
ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಪಾಕಿಸ್ತಾನ

By

Published : Nov 10, 2020, 9:07 PM IST

ರಾವಲ್ಪಿಂಡಿ :ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಪ್ರಾಬಲ್ಯ ಸಾಧಿಸಿದ ಪಾಕಿಸ್ತಾನ ತಂಡ ಜಿಂಬಾಬ್ವೆ ವಿರುದ್ಧದ 3ನೇ ಪಂದ್ಯದಲ್ಲಿ 8 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಟಿ20 ಸರಣಿಯನ್ನ 3-0ಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.

ರಾವಲ್ಪಿಂಡಿಯಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಜಿಂಬಾಬ್ವೆ, 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು ಕೇವಲ 129 ರನ್​ ಗಳಿಸಿತ್ತು. ನಾಯಕ ಚಿಬಾಬ 31 ರನ್​ ಗಳಿಸಿದ್ರೆ, ಟ್ರಿಪಾನೋ 28 ರನ್​ಗಳಿಸಿದರು.

ಪಾಕಿಸ್ತಾನ ಪರ ಯುವ ಸ್ಪಿನ್ನರ್ ಉಸ್ಮಾನ್ ಕಾದಿರ್ 13ಕ್ಕೆ 4 ವಿಕೆಟ್​, ಇಮಾದ್ ವಾಸಿಮ್ 17ಕ್ಕೆ 2 ಹಾಗೂ ಹಸ್ನೈನ್ ಮತ್ತು ರವೂಫ್ ತಲಾ ಒಂದು ವಿಕೆಟ್​ ಪಡೆದು ಜಿಂಬಾಬ್ವೆಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದರು.

130 ರನ್​ಗಳ ಸಾಧಾರಣ ಮೊತ್ತ ಬೆನ್ನತ್ತಿದ ಪಾಕಿಸ್ತಾನ್​, 15.2 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು ಗುರಿ ತಲುಪಿತು. ಫಾಖರ್ ಝಮಾನ್ 21, ಹೈದರ್ ಅಲಿ 27, ಅದ್ಭುಲ್ಲಾ ಸಫೀಕ್ ಅಜೇಯ 41, ಖುಶ್ದಿಲ್ ಶಾ ಅಜೇಯ 36 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಪಾಕಿಸ್ತಾನ ತಂಡ ಈ ಗೆಲುವಿನ ಮೂಲಕ ಜಿಂಬಾಬ್ವೆ ವಿರುದ್ಧ ಸತತ 14ನೇ ಪಂದ್ಯ ಗೆದ್ದ ದಾಖಲೆಗೆ ಪಾತ್ರವಾಯಿತು. ​

ABOUT THE AUTHOR

...view details