ರಾವಲ್ಪಿಂಡಿ:ನಾಯಕ ಬಾಬರ್ ಅಜಮ್ ಅಬ್ಬರದ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ ಮೊದಲ ಟಿ-20 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿ, ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.
ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ವೆಸ್ಲಿ ಮಾಧೆವೆರೆ ಅವರ (70 ರನ್) ಅರ್ಧಶತಕ, ಬ್ರೆಂಡನ್ ಟೇಲರ್ 20, ಸೀನ್ ವಿಲಿಯಮ್ಸ್ 25 ಹಾಗೂ ಚಿಗುಂಬುರ 21 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತ್ತು.
ಪಾಕಿಸ್ತಾನ ಪರ ಹ್ಯಾರೀಸ್ ರವೂಫ್ 25ಕ್ಕೆ 2, ರಿಯಾಜ್ 37ಕ್ಕೆ 2, ಮೊಹಮ್ಮದ್ ಹಸ್ನೈನ್ 25ಕ್ಕೆ 1, ಉಸ್ಮಾನ್ ಖಾದಿರ್ 24ಕ್ಕೆ 1 ವಿಕೆಟ್ ಪಡೆದು ಮಿಂಚಿದರು.