ಕರ್ನಾಟಕ

karnataka

ETV Bharat / sports

ಮೊದಲ ಏಕದಿನ: ಹರಿಣಗಳ ವಿರುದ್ಧ ಪಾಕ್​ಗೆ ಅಂತಿಮ ಎಸೆತದಲ್ಲಿ ರೋಚಕ ಗೆಲುವು - ಸೆಂಚೂರಿಯನ್ ಏಕದಿನ ಪಂದ್ಯ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಂತಿಮ ಎಸೆತದಲ್ಲಿ ಗುರಿ ತಲುಪುವ ಮೂಲಕ ಪಾಕಿಸ್ತಾನ ರೋಚಕ ಜಯ ಗಳಿಸಿದೆ.

Pakistan beat South Africa by 3 wickets
ಮೊದಲ ಏಕದಿನ : ಹರಿಣಗಳ ವಿರುದ್ಧ ಪಾಕ್​ಗೆ ಅಂತಿಮ ಎಸೆತದಲ್ಲಿ ರೋಚಕ ಗೆಲುವು

By

Published : Apr 3, 2021, 6:26 AM IST

ಸೆಂಚೂರಿಯನ್​:ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನವು ಮೂರು ವಿಕೆಟ್​ಗಳ ರೋಚಕ ಜಯ ದಾಖಲಿಸಿದೆ.

ಟಾಸ್​ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್​​ ಅಜಂ ಹರಿಣಗಳನ್ನು ಬ್ಯಾಟಿಂಗ್​​​​ಗೆ ಆಹ್ವಾನಿಸಿದರು. ಬ್ಯಾಟಿಂಗ್​ಗೆ​ ನಡೆಸಿದ ದ. ಆಫ್ರಿಕಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ವಾನ್​ ಡೆರ್​ ಡಸೆನ್​ ಜವಾಬ್ದಾರಿಯುತ ಶತಕದ (123) ಹಾಗೂ ಡೆವಿಡ್​ ಮಿಲ್ಲರ್​ ಅರ್ಧಶತಕ (50)ದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 273 ರನ್​ ಪೇರಿಸಿತು.

ಇನ್ನುಳಿದಂತೆ ಮಾರ್ಕ್ರಂ 19, ಡಿ ಕಾಕ್​​ 20, ಫೆಹ್ಲುಕ್ವಾಯೋ 29 ಹಾಗೂ ರಬಾಡ 13 ರನ್​ ಬಾರಿಸಿ ತಂಡಕ್ಕೆ ನೆರವಾದರು. ಪಾಕ್​ ಪರ ಶಾಹೀನ್​ ಆಫ್ರಿದಿ ಹಾಗೂ ಹ್ಯಾರಿಸ್​ ರೌಫ್​ ತಲಾ 2 ವಿಕೆಟ್​ ಪಡೆದರು.

274 ರನ್​ಗಳ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ನಾಯಕ ಬಾಬರ್​ ಅಜಂ ಶತಕದಾಟದಿಂದ ಮೇಲುಗೈಗೆ ಕಾರಣರಾದರು. ಬಾಬರ್​ 104 ಎಸೆತಗಳಲ್ಲಿ 103 ರನ್​ ಬಾರಿಸಿದರೆ, ಆರಂಭಿಕ ಆಟಗಾರ ಇಮಾಮ್​ ಉಲ್​ ಹಕ್​ 70 ರನ್​ ಗಳಿಸಿದರು. ಅಂತಿಮ ಓವರ್​ಗಳಲ್ಲಿ ಆಲ್​ರೌಂಡರ್​​ ಶಹಾಬ್​ ಖಾನ್​ ಅತ್ಯಮೂಲ್ಯ 33 ರನ್​ ಗಳಿಸಿ ಪಾಕ್​ ಗೆಲುವಿಗೆ ನೆರವಾದರು. ಅಂತಿಮ ಎಸೆತದಲ್ಲಿ ಗುರಿ ತಲುಪುವ ಮೂಲಕ ಪಾಕಿಸ್ತಾನ ರೋಚಕ ಜಯ ಗಳಿಸಿತು.

ಮೂರು ಪಂದ್ಯಗಳ ಸರಣಿಯಲ್ಲಿ ಪಾಕ್​ 1-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. 2ನೇ ಏಕದಿನ ಪಂದ್ಯ ಜೋಹಾನ್ಸ್​ಬರ್ಗ್​ನಲ್ಲಿ ನಾಳೆ ಏ.4ರಂದು ನಡೆಯಲಿದೆ.

ಇದನ್ನೂ ಓದಿ :ಸಿಎಸ್​ಕೆ ಕ್ಯಾಂಪ್​ನಲ್ಲಿ ಧೋನಿ ಭೇಟಿ ಮಾಡಿದ 'ಸರ್‌.ಜಡೇಜಾ' ಹೇಳಿದ್ದೇನು?

ABOUT THE AUTHOR

...view details