ಸೆಂಚುರಿಯನ್:ಫಖರ್ ಝಮಾನ್ ಶತಕ ಮತ್ತು ನಾಯಕ ಬಾಬರ್ ಅಜಮ್ರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ನೆರವನಿಂದ ಪಾಕಿಸ್ತಾನ ತಂಡದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು 28ರನ್ಗಳಿಂದ ಮಣಿಸಿದೆ. ಜೊತೆಗೆ 2-1ರಿಂದ ಸರಣಿಯನ್ನು ವಶಪಡಿಸಿಕೊಂಡಿದೆ.
ಟಾಸ್ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 320 ರನ್ಗಳಿಸಿತು. ಆರಂಭಿಕ ಬ್ಯಾಟ್ಸ್ಮನ್ ಫಖರ್ ಝಮಾನ್ 104 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 101 ರನ್, ಬಾಬರ್ ಅಜಮ್ 82 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 94 ರನ್ಗಳಿಸಿದರು. ಇಮಾಮ್ ಉಲ್ ಹಕ್ 57 ಹಾಗೂ ಹಸನ್ ಅಲಿ 11 ಎಸೆತಗಳಲ್ಲಿ ಅಜೇಯ 32 ರನ್ಗಳಿಸಿದರು.
ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ 45ಕ್ಕೆ 3, ಐಡೆನ್ ಮ್ಯಾರ್ಕ್ರಮ್ 48ಕ್ಕೆ 2 ವಿಕೆಟ್ , ಸ್ಮಟ್ಸ್ ಮತ್ತು ಪೆಹ್ಲುಕ್ವಾಯೋ ತಲಾ ಒಂದು ವಿಕೆಟ್ ಪಡೆದಿದ್ದರು.