ಕರಾಚಿ: ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ಮನ್ ಬಾಬರ್ ಅಜಂ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕಗಳಿಸುವ ಮೂಲಕ ಕಡಿಮೆ ಇನ್ನಿಂಗ್ಸ್ಗಳಲ್ಲಿ 11 ಶತಕ ದಾಖಲಿಸಿದ ಬ್ಯಾಟ್ಸ್ಮನ್ ಎಂದೆನಿಸಿಕೊಂಡರು.
ಕರಾಚಿಯಲ್ಲಿ 9 ವರ್ಷಗಳ ಬಳಿಕ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಪರ ಶತಕ ಬಾರಿಸಿರುವ ಅಜಂ, ಕೇವಲ 71 ಇನ್ನಿಂಗ್ಸ್ಗಳಲ್ಲಿ ತಮ್ಮ ವೃತ್ತಿ ಜೀವನದ 11 ನೇ ಶತಕ ಪೂರ್ಣಗೊಳಿಸಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ಶತಕ ಬಾರಿಸಿರುವ ದಾಖಲೆ ವೀರ ಭಾರತ ತಂಡದ ನಾಯಕ ಕೊಹ್ಲಿ ತಮ್ಮ 11 ನೇ ಏಕದಿನ ಶತಕವನ್ನು 82 ಇನ್ನಿಂಗ್ಸ್ನಲ್ಲಿ ದಾಖಲಿಸಿದ್ದರು. ಇನ್ನು ವೇಗವಾಗಿ 11 ಶತಕ ಗಳಿಸಿರುವ ದಾಖಲೆ ದಕ್ಷಿಣ ಆಫ್ರಿಕಾ ಹಾಸಿಂ ಆಮ್ಲ 64 ಇನ್ನಿಂಗ್ಸ್ಗಳಲ್ಲಿ, ಕ್ವಿಂಟನ್ ಡಿಕಾಕ್ 65 ಇನ್ನಿಂಗ್ಸ್ಗಳಲ್ಲಿ 11 ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.
ಇದೀಗ 71 ಇನ್ನಿಂಗ್ಸ್ಗಳಲ್ಲಿ 11 ನೇ ಶತಕ ಬಾರಿಸುವ ಮೂಲಕ ಬಾಬರ್ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಭಾರತದ ಶಿಖರ್ ಧವನ್ ಹಾಗೂ ಡೇವಿಡ್ ವಾರ್ನರ್(86) ಕೊಹ್ಲಿ ನಂತರದ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ 88 ಇನ್ನಿಂಗ್ಸ್ಗಳಲ್ಲಿ 11 ಶತಕ ಬಾರಿಸಿದ್ದರು.