ಲಾಹೋರ್ [ಪಾಕಿಸ್ತಾನ]: ದಕ್ಷಿಣ ಆಫ್ರಿಕಾ ತಂಡ ಮತ್ತು ಪಾಕಿಸ್ತಾನ ಮೊದಲ ಟಿ - 20 ಪಂದ್ಯದಲ್ಲಿ ಅತಿಥೇಯ ಪಾಕಿಸ್ತಾನ ತಂಡ 3 ರನ್ಗಳ ರೋಚಕ ಜಯ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಾಕಿಸ್ತಾನ ಆರಂಭಿಕ ಆಘಾತ ಅನುಭವಿಸಿತು. ಕೇವಲ 1 ರನ್ಗಳಿಸಿದಾಗ ನಾಯಕ ಬಾಬರ್ ಅಜಂ ರನ್ ಔಟ್ ಆದರು. ನಂತರ ಕ್ರೀಸ್ ನಲ್ಲಿ ಗಟ್ಟಿಯಾಗಿನಿಂತ ಮೊಹಮ್ಮದ್ ರಿಜ್ವಾನ್ ಚೊಚ್ಚಲ ಟಿ - 20 ಶತಕ ಸಿಡಿಸಿ ಮಿಂಚಿದರು. ಕೇವಲ 64 ಎಸೆತಗಳಲ್ಲಿ ಏಳು ಸಿಕ್ಸರ್ ಮತ್ತು ಆರು ಬೌಂಡರಿಗಳ ಸಹಾಯದಿಂದ 104 ರನ್ ಸಿಡಿಸಿದರು. ಅಂತಿಮವಾಗಿ ಪಾಕಿಸ್ತಾನ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತು.
ಈ ಬೃಹತ್ ಮೊತ್ತವನ್ನ ಬೆನ್ನಟ್ಟಿದ ಸೌತ್ ಆಫ್ರಿಕಾ ತಂಡ ನಿಗದಿತ 20 ಓವರ್ಗಳಲ್ಲಿ 166 ರನ್ ಗಳಿಸಿತು, ಇದರಿಂದ ವಿರೋಚಿತ ಸೋಲು ಅನುಭವಿಸಿತು. ಸೌತ್ ಆಫ್ರಿಕಾ ಪರ ಉತ್ತಮ ಬ್ಯಾಟಿಂಗ್ ಮಾಡಿದ ರೀಜಾ ಹೆಂಡ್ರಿಕ್ಸ್ 42 ಎಸೆತಗಳಲ್ಲಿ (8 ಬೌಂಡರಿ) 54 ರನ್ ಗಳಿಸಿದರು. ಇವರಿಗೆ ಉತ್ತಮ ಸಾತ್ ನೀಡಿದ ಮಲನ್ 44 ರನ್ ಗಳಿಸಿದರು ತಂಡಕ್ಕೆ ಜಯ ತಂದು ಕೊಡುವಲ್ಲಿ ವಿಫಲರಾದರು.
ಓದಿ : ನಾಳೆಯಿಂದ 2ನೇ ಟೆಸ್ಟ್ ಪಂದ್ಯ.. ಹಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ..
ಸಂಕ್ಷಿಪ್ತ ಸ್ಕೋರ್ :ಪಾಕಿಸ್ತಾನ 20 ಓವರ್ಗಳಲ್ಲಿ 169/6 ಮೊಹಮ್ಮದ್ ರಿಜ್ವಾನ್ 104, ಹೈದರ್ ಅಲಿ 21, ಪೀಲಕ್ವಾಯೋ 2/33, ಸೌತ್ ಆಫ್ರಿಕಾ 20 ಓವರ್ಗಳಲ್ಲಿ 166/6 ಮಲನ್ 44, ರೀಜಾ ಹೆಂಡ್ರಿಕ್ಸ್ 54, ಹ್ಯಾರಿಸ್ ರವೂಫ್ 2/44, ಉಸ್ಮಾನ್ ಖಾದಿರ್ 2/21.