ಕರಾಚಿ:ಕ್ವಿಂಟನ್ ಡಿಕಾಕ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ 2 ಟೆಸ್ಟ್ ಪಂದ್ಯ ಹಾಗೂ 3 ಟಿ-20 ಪಂದ್ಯಗಳನ್ನಾಡಲು 14 ವರ್ಷಗಳ ಬಳಿಕ ಪಾಕಿಸ್ತಾನದ ಕರಾಚಿಗೆ ಬಂದಿಳಿದಿದೆ.
ಕರಾಚಿಯಲ್ಲಿ ಜನವರಿ 26ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಮತ್ತು ಫೆಬ್ರವರಿ 11ರಿಂದ ಟಿ-20 ಸರಣಿ ನಡೆಯಲಿದೆ. ದಕ್ಷಿಣ ಆಫ್ರಿಕಾ ತಂಡ ಕರಾಚಿಯನ್ನು ಮುಟ್ಟಿದೆ ಎಂದು ಕ್ರಿಕೆಟ್ ಸೌತ್ ಆಫ್ರಿಕಾ ತನ್ನ ಟ್ವಿಟರ್ನಲ್ಲಿ ಹರಿಣ ಪಡೆ ವಿಮಾನದಿಂದ ಕೆಳಗಿಳಿಯುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದೆ.
ದಕ್ಷಿಣ ಆಫ್ರಿಕಾ ತಂಡ ಕೊನೆಯದಾಗಿ 2007ರಲ್ಲಿ ಪಾಕಿಸ್ತಾನದ ಪ್ರವಾಸ ಕೈಗೊಂಡಿತ್ತು. ಆ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದಿತ್ತು. ತದನಂತರ 2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಪಾಕ್ನಲ್ಲಿ ಭಯೋತ್ಪಾದಕರ ದಾಳಿ ನಡೆದ ನಂತರ ಯಾವುದೇ ರಾಷ್ಟ್ರ ಪ್ರವಾಸ ಕೈಗೊಂಡಿರಲಿಲ್ಲ. ಹಾಗಾಗಿ ಪಾಕಿಸ್ತಾನ ತಂಡ ತನ್ನ ತವರಿನ ಪಂದ್ಯಗಳನ್ನು ಯುಎಇಯಲ್ಲಿ ಅಯೋಜಿಸುತ್ತಿತ್ತು. ಇದೀಗ ಮತ್ತೆ ಕಳೆದ ವರ್ಷದಿಂದ ತವರಿನಲ್ಲಿ ಪಂದ್ಯಗಳನ್ನು ಆಯೋಜನೆ ಮಾಡುತ್ತಿದೆ. ಈಗಾಗಲೇ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಪಾಕಿಸ್ತಾನದಲ್ಲಿ ದ್ವಿಪಕ್ಷೀಯ ಸರಣಿಯನ್ನಾಡಿವೆ.
ಇನ್ನು ದಕ್ಷಿಣ ಆಫ್ರಿಕಾ ಪಾಕಿಸ್ತಾನ ತಂಡವನ್ನು 2010 ಹಾಗೂ 2013ರಲ್ಲಿ ಯುಎಇಯಲ್ಲಿ ಎದುರಿಸಿತ್ತು.
ಇದನ್ನು ಓದಿ:ಲಿಯಾನ್ ಬೌಲಿಂಗ್ನಲ್ಲಿ ಔಟಾಗಿದ್ದಕ್ಕೆ ವಿಷಾದವಿಲ್ಲ ಎಂದ ರೋಹಿತ್: ವಿಡಿಯೋ