ಕರಾಚಿ: ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ನಾಲ್ವರನ್ನು ಪೆವಿಲಿಯನ್ಗಟ್ಟಿರುವ ಪಾಕಿಸ್ತಾನ ತಂಡ ಕರಾಚಿ ಟೆಸ್ಟ್ನಲ್ಲಿ ಬಿಗಿ ಹಿಡಿತ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 220 ಕಟ್ಟಿಹಾಕಿದ್ದ ಆತಿಥೇಯ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 378 ರನ್ ಗಳಿಸಿ 158 ರನ್ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು.
158 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿತ್ತಾದರೂ 3ನೇ ದಿನದಾಟದ ಅಂತ್ಯಕ್ಕೆ ಕೆಲವೇ ಓವರ್ಗಳಿರುವಾಗ ಯಾಸಿರ್ ಶಾ ಬಲೆಗೆ ಬಿದ್ದು 175ಕ್ಕೆ 1 ಇದ್ದ ತಂಡ ದಿಢೀರ್ 185 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಆರಂಭಿಕ ಡೀನ್ ಎಲ್ಗರ್ ಕೇವಲ 29 ರನ್ ಗಳಿಸಿ ಔಟಾಗಿದ್ದರು. ಆದರೆ ನಂತರ ಎಚ್ಚರಿಕೆಯ ಆಟ ಆಡಿದ್ದ ಡಾಸೆನ್ ಮತ್ತು ಮಾರ್ಕ್ರಮ್127 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ತಂದಿದ್ದರು. ಆದರೆ 3ನೇ ದಿನದಾಟಕ್ಕೆ 10 ಓವರ್ಗಳಿದ್ದ ಸಂದರ್ಭದಲ್ಲಿ 64 ರನ್ ಗಳಿಸಿದ್ದ ವ್ಯಾನ್ ಡರ್ ಡಾಸೆನ್, ಯಾಸಿರ್ ಶಾ ಬೌಲಿಂಗ್ನಲ್ಲಿ ಅಬೀದ್ ಅಲಿಗೆ ಕ್ಯಾಚ್ ನೀಡಿ ಔಟಾದರು.
ನಂತರ ಬಂದ ಪ್ಲೆಸಿಸ್ ಕೇವಲ 10 ರನ್ ಗಳಿಸಿ ಯಾಸಿರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರೆ, 224 ಎಸೆತಗಳಲ್ಲಿ 74 ರನ್ ಗಳಿಸಿ ರಕ್ಷಣಾತ್ಮಕ ಆಟವಾಡುತ್ತಿದ್ದ ಮಾರ್ಕ್ರಮ ಕೊನೆಯ ಒಂದೆರಡು ಓವರ್ ಇದ್ದ ವೇಳೆ ನಯುಮನ್ ಬೌಲಿಂಗ್ನಲ್ಲಿ ಅಬೀದ್ ಅಲಿಗೆ ಕ್ಯಾಚ್ ನೀಡಿ ಔಟದರು.
ಪ್ರಸ್ತುತ ನಾಯಕ ಕ್ವಿಂಟನ್ ಡಿಕಾಕ್(0) ಮತ್ತು ಕೇಶವ್ ಮಹಾರಾಜ್(2) ಕ್ರೀಸ್ನಲ್ಲಿದ್ದಾರೆ. ಪ್ರಸ್ತುತ ದಕ್ಷಿಣ ಆಫ್ರಿಕಾ ತಂಡ 29 ರನ್ಗಳ ಮುನ್ನಡೆ ಸಾಧಿಸಿದೆ. ಡಿಕಾಕ್, ಬವುಮಾ ಮಾತ್ರ ತಂಡದಲ್ಲಿ ಉಳಿದಿರುವ ಬ್ಯಾಟ್ಸ್ಮನ್ಗಳಾಗಿದ್ದು, ಪಂದ್ಯವನ್ನು ಡ್ರಾ ಸಾಧಿಸುವ ಅಥವಾ ಗೆಲ್ಲಿಸುವ ಹೊಣೆಗಾರಿಕೆ ಅವರಿಬ್ಬರ ಮೇಲಿದೆ.
ಇದನ್ನು ಓದಿ:ಫವಾದ್ ಆಲಂ ಭರ್ಜರಿ ಶತಕ... ಆತನ ಆಟ ಬಣ್ಣಿಸಲು ಪದಗಳೇ ಸಾಲುತ್ತಿಲ್ಲ ಎಂದ ಬೌಲರ್!