ಕರ್ನಾಟಕ

karnataka

ETV Bharat / sports

​ ಹಿಂದೂ ಎಂಬ ಕಾರಣಕ್ಕೆ ಪಾಕ್​​ ಸಹ ಪ್ಲೇಯರ್ಸ್​​ ಅನುಚಿತ ವರ್ತನೆ: ಶೊಯೇಬ್​​ ಹೇಳಿಕೆ ನಿಜ ಎಂದ ಕನೇರಿಯಾ! - ಶೊಯೇಬ್​ ಮಲಿಕ್​

ತಾವು ಪಾಕ್​ ಕ್ರಿಕೆಟ್​ ತಂಡದಲ್ಲಿದ್ದ ವೇಳೆ ಹಿಂದೂ ಎಂಬ ಕಾರಣಕ್ಕೆ ಇತರ ಪ್ಲೇಯರ್ಸ್​ ತಮ್ಮೊಂದಿಗೆ ಮಾತನಾಡುತ್ತಿರಲಿಲ್ಲ ಎಂಬ ಮಾತು ಸತ್ಯ ಎಂದು ದಾನಿಶ್​ ಕನೇರಿಯಾ ಒಪ್ಪಿಕೊಂಡಿದ್ದಾರೆ.

Pak cricketer Danish Kaneria
ದಾನಿಶ್​ ಕನೇರಿಯಾ

By

Published : Dec 26, 2019, 10:48 PM IST

ಇಸ್ಲಾಮಾಬಾದ್​​:ಪಾಕ್​ ಕ್ರಿಕೆಟ್​ ತಂಡದ ಮಾಜಿ ಆಟಗಾರ ದಾನಿಶ್​ ಕನೇರಿಯಾ ಹಿಂದೂ ಎಂಬ ಕಾರಣಕ್ಕೆ ಕೆಲ ಪ್ಲೇಯರ್ಸ್​ ಅವರೊಂದಿಗೆ ಅನುಚಿತವಾಗಿ ವರ್ತನೆ ಮಾಡ್ತಿದ್ದರು ಎಂಬ ಶೊಯೇಬ್​ ಹೇಳಿಕೆ ನಿಜ ಎಂದು ಖುದ್ದಾಗಿ ಕನೇರಿಯಾ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ ತಂಡ ಪ್ರತಿನಿಧಿಸಿದ್ದ ಎರಡನೇ ಹಿಂದೂ ಆಟಗಾರ ಎಂಬ ಹೆಗ್ಗಳಿಕೆ ಕನೇರಿಯಾ ಅವರದ್ದಾಗಿದ್ದು, ಅದೇ ಕಾರಣಕ್ಕೆ ಅವರನ್ನ ತಂಡದಿಂದ ದೂರ ಇಡಲಾಗಿತ್ತು. ಅವರ ಜೊತೆಗೆ ಒಟ್ಟಿಗೆ ಕುಳಿತು ಯಾವುದೇ ಪ್ಲೇಯರ್ಸ್​ ಊಟ ಮಾಡ್ತಿರಲಿಲ್ಲ.

ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಪ್ರತಿಕ್ರಿಯೆ ನೀಡಿರುವ ಕನೇರಿಯಾ, ಹೌದು ಶೊಯೇಬ್​ ಅಖ್ತರ್​ ಹೇಳಿರುವುದು ಸತ್ಯ. ನಾನು ಹಿಂದೂ ಎಂಬ ಕಾರಣಕ್ಕಾಗಿ ಯಾರೂ ನನ್ನೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದರು. ಅವರ ಹೆಸರು ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸಲಿದ್ದೇನೆ ಎಂದಿದ್ದಾರೆ. ಈ ಹಿಂದೆ ನಾನು ಹೆಸರು ಬಹಿರಂಗ ಪಡಿಸುವಷ್ಟು ಧೈರ್ಯ ಹೊಂದಿರಲಿಲ್ಲ. ಆದರೆ ಇದೀಗ ನಾನು ಅದಕ್ಕೆ ಹೆದರುವುದಿಲ್ಲ ಎಂದಿದ್ದಾರೆ.

ABOUT THE AUTHOR

...view details