ಆಕ್ಲೆಂಡ್: ಕ್ರೈಸ್ಟ್ಚರ್ಚ್ನಲ್ಲಿ ಐಸೊಲೇಷನ್ನಲ್ಲಿರುವ ಪಾಕಿಸ್ತಾನ್ ಕ್ರಿಕೆಟ್ ತಂಡದ ಕೊನೆಯ ಕೋವಿಡ್ ಟೆಸ್ಟ್ನಲ್ಲಿ ನೆಗೆಟಿವ್ ವರದಿ ಪಡೆದಿದ್ದು, ನ್ಯೂಜಿಲ್ಯಾಂಡ್ ಸರ್ಕಾರದಿಂದ ತರಬೇತಿಗೆ ಅವಕಾಶ ಪಡೆಯಲು ಸಜ್ಜಾಗಿದೆ.
ಪಾಕಿಸ್ತಾನ ತಂಡ ಕಳೆದ 12 ದಿನಗಳಲ್ಲಿ ಐಸೋಲೇಷನ್ನಲ್ಲಿದ್ದು ಸೋಮವಾರ 5ನೇ ಮತ್ತು ಅಂತಿಮ ಕೋವಿಡ್ ಟೆಸ್ಟ್ನಲ್ಲಿ ವರದಿ ನೆಗೆಟಿವ್ ಬಂದಿದೆ. ಹಾಗಾಗಿ ಮಂಗಳವಾರದಿಂದ ತರಬೇತಿ ಪಡೆಯಲು ಕ್ವೀನ್ಸ್ಟೌನ್ಗೆ ಪ್ರಯಾಣಿಸಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.
"ಪಾಕಿಸ್ತಾನ ತಂಡ 5ನೇ ಕೋವಿಡ್ ಟೆಸ್ಟ್ನಲ್ಲಿ ನೆಗೆಟಿವ್ ವರದಿ ಪಡೆದಿದ್ದಾರೆ. ಅವರೆಲ್ಲರೂ ಆರೋಗ್ಯ ಸಚಿವಾಲಯದಿಂದ ಅನುಮತಿ ಪಡೆದ ಬಳಿಕ ನಾಳೆ ತರಬೇತಿ ಪಡೆಯಲು ಕ್ವೀನ್ಸ್ಟೌನ್ ಗೆ ಪ್ರಯಾಣಿಸಲಿದ್ದಾರೆ. 6ನೇ ದಿನ ಪಾಸಿಟಿವ್ ಪಡೆದಿರುವ ಆಟಗಾರರು ಮಾತ್ರ ಐಸೊಲೇಷನ್ ಮುಂದುವರಿಸಲಿದ್ದಾರೆ. ಇಂದು ನೆಗೆಟಿವ್ ಪಡೆದವರು ಮಾತ್ರ ಅನುಮತಿ ಪಡೆದಿದ್ದಾರೆ "
ಪಾಕಿಸ್ತಾನ ತಂಡ ಕ್ವೀನ್ಸ್ಟೌನ್ನಲ್ಲಿ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಅಭ್ಯಾಸ ಆರಂಭಿಸಲಿದ್ದಾರೆ. ಡಿಸೆಂಬರ್ 18ರಂದು ಈಡನ್ ಪಾರ್ಕ್ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ.