ಕರ್ನಾಟಕ

karnataka

ETV Bharat / sports

ಅಭಿಮಾನಿಗಳ ಪ್ರೀತಿ, ಬೆಂಬಲ ನೋಡಿ ನನ್ನ ಹೃದಯ ತುಂಬಿ ಬಂದಿದೆ: ಗಾಯಾಳು ಶ್ರೇಯಸ್ ಅಯ್ಯರ್

ಎಡ ಭುಜದ ಗಾಯಕ್ಕೊಳಗಾಗಿರುವ ಅಯ್ಯರ್​ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದರಿಂದ ಏಪ್ರಿಲ್​ 9ರಿಂದ ಆರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್​ನ​ ಮೊದಲಾರ್ಧಕ್ಕೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ. ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲ ಕಂಡು ಶ್ರೇಯಸ್​ ಭಾವುಕರಾಗಿದ್ದಾರೆ.

ಶ್ರೇಯಸ್​ ಅಯ್ಯರ್​
ಶ್ರೇಯಸ್​ ಅಯ್ಯರ್​

By

Published : Mar 25, 2021, 4:56 PM IST

ಪುಣೆ:ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಭುಜದ ಗಾಯಕ್ಕೊಳಗಾಗಿರುವ ಭಾರತ ತಂಡದ ಶ್ರೇಯಸ್​ ಅಯ್ಯರ್ ಮುಂದಿನ 2 ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಈ ಸಂದರ್ಭದಲ್ಲಿ ತಮ್ಮ ಚೇತರಿಕೆಗೆ ಪ್ರಾರ್ಥಿಸಿದ ಅಭಿಮಾನಿಗಳ ಬೆಂಬಲ ನೋಡಿ ತಮ್ಮ ಹೃದಯ ತುಂಬಿದೆ ಎಂದು ಹೇಳಿರುವ ಅಯ್ಯರ ಬಲಿಷ್ಠವಾಗಿ ಕಮ್​ಬ್ಯಾಕ್​ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

"ನಾನು ನಿಮ್ಮ ಸಂದೇಶಗಳನ್ನು ಓದುತ್ತಿದ್ದೇನೆ, ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲದ ಹೊರ ಹರಿಯುವಿಕೆಯಿಂದ ನಾನು ಮುಳುಗಿ ಹೋಗಿದ್ದೇನೆ​. ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು. ಎಲ್ಲರ ಅಭಿಲಾಷೆಯಂತೆ ಬಲಿಷ್ಠನಾಗಿ ಹಿಂತಿರುಗಲಿದ್ದೇನೆ" ಎಂದು ತಿಳಿಸಿದ್ದಾರೆ.

ಇದನ್ನು ಓದಿ:ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ: ಆರೋಗ್ಯ ಸಮಸ್ಯೆಯಿಂದ ಶ್ರೇಯಸ್​ ಅಯ್ಯರ್​ ಔಟ್​

"ಶ್ರೇಯಸ್​ ಅಯ್ಯರ್​ ಗಾಯಗೊಂಡಿರುವುದು ನಮ್ಮ ಮನಸ್ಸನ್ನು ಧ್ವಂಸಗೊಂಡಿದೆ. ಆರಾಮಾಗಿರಿ ಕ್ಯಾಪ್ಟನ್​, ನೀವು ಬೇಗ ಚೇತರಿಸಿಕೊಳ್ಳಲಿದ್ದೀರಿ ಎಂಬ ಭರವಸೆಯಿದೆ. ಇದರಿಂದ ನೀವು ಬಲಿಷ್ಠರಾಗಿ ಕಮ್​ಬ್ಯಾಕ್​ ಮಾಡುತ್ತೀರೆಂಬ ನಂಬಿಕೆ ನಮಗಿದೆ. ಟಿ20 ವಿಶ್ವಕಪ್​ನಲ್ಲಿ ನಿಮ್ಮ ಅವಶ್ಯಕತೆ ಭಾರತ ತಂಡಕ್ಕೆ ಅಗತ್ಯವಿದೆ" ಎಂದು ಡೆಲ್ಲಿ ಕ್ಯಾಪಿಟಲ್ಸ್​ ಸಹ ಮಾಲೀಕ ಪಾರ್ಥ್​​ ಜಿಂದಾಲ್​ ಟ್ವೀಟ್ ಮೂಲಕ ಡಿಸಿ ನಾಯಕ ಬೇಗ ಹುಷಾರಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಎಡ ಭುಜದ ಗಾಯಕ್ಕೊಳಗಾಗಿರುವ ಅಯ್ಯರ್​ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದರಿಂದ ಏಪ್ರಿಲ್​ 9ರಿಂದ ಆರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್​ನ​ ಮೊದಲಾರ್ಧಕ್ಕೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details