ನವದೆಹಲಿ: 2007 ರಲ್ಲಿ ಪಾಕಿಸ್ತಾನವನ್ನ ರೋಚಕ ಪಂದ್ಯದಲ್ಲಿ ಭಾರತ ತಂಡ ಐಪಿಎಲ್ ಮೆನ್ಸ್ ವಿಶ್ವಕಪ್ ಎತ್ತಿ ಹಿಡಿದಿತ್ತು. ಆ ಬಳಿಕ ಟಿ-20 ಪಂದ್ಯಗಳು ಯಾವ ಪರಿ ಹಿಟ್ ಆಯಿತು ಎಂದರೆ, ಬಿಸಿಸಿಐ ಐಪಿಎಲ್ ಅನ್ನೇ ಹುಟ್ಟು ಹಾಕಿ, ಹಣದ ಥೈಲಿಯನ್ನೇ ಹರಿಸುವಂತೆ ಮಾಡಿತು.
ಐಪಿಎಲ್ ಮಾದರಿಯಲ್ಲಿ ಮಹಿಳಾ ಟಿ-20 ಲೀಗ್... ಎಲ್ಲಿ... ಹೇಗೆ? - undefined
ಕ್ರಿಕೆಟ್ ಆಸ್ಟ್ರೇಲಿಯಾ, ವುಮೆನ್ ಬಿಗ್ ಬ್ಯಾಶ್ ಲೀಗ್( WBBL) ಆರಂಭಿಸಲು ನಿರ್ಧರಿಸಿದ್ದು, ಪುರಷರ ಮತ್ತು ಮಹಿಳೆಯರ ಈ ಲೀಗ್ನಲ್ಲಿ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಆಟಗಾರರಿಗೆ ಅವಕಾಶ ನೀಡಲು ನಿರ್ಧರಿಸಿದೆ.
ಚುಟುಕು ಕ್ರಿಕೆಟ್ ವಿಶ್ವದಾದ್ಯಂತ ಜನಪ್ರೀಯವಾಯಿತು. ಈ ಎಲ್ಲ ವಿಷಯ ಕ್ರಿಕೆಟ್ ಪ್ರಿಯರಿಗೆ ಗೊತ್ತೆ ಇದೆ. ಪುರುಷರ ಟಿ-20 ಜನಪ್ರೀಯವಾಗಿದೆ. ಮಹಿಳಾ ಟಿ-20ಯೂ ಜನಪ್ರಿಯತೆ ಪಡೆದುಕೊಳ್ಳುವತ್ತ ಸಾಗಿದೆ. ಈ ನಡುವೆ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವುಮೆನ್ ಬಿಗ್ ಬ್ಯಾಶ್ ಲೀಗ್( WBBL) ಆರಂಭಿಸಲು ನಿರ್ಧರಿಸಿದೆ. ಪುರಷರ ಮತ್ತು ಮಹಿಳೆಯರ ಈ ಲೀಗ್ನಲ್ಲಿ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಆಟಗಾರರಿಗೆ ಅವಕಾಶ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ.
ಇನ್ನು ಶೀಘ್ರವೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸಹ ಕಿಯಾ ಸೂಪರ್ ಲೀಗ್( ಕೆಎಸ್ಎಲ್ KSL) ಆರಂಭಿಸಲು ಚಿಂತನೆ ನಡೆಸಿದೆ.