ಕರಾಚಿ:ಈ ವರ್ಷ ಭಾರತದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಬೇಕಾದರೆ ಸ್ಪಿನ್ ವಿರುದ್ಧದ ಆಟವನ್ನು ಸುಧಾರಿಸಬೇಕಾಗಿದೆ ಎಂದು ಪಾಕ್ನ ಮುಖ್ಯ ಕೋಚ್ ಮಿಸ್ಬಾ - ಉಲ್ - ಹಕ್ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ -20 ಸರಣಿಯನ್ನು ಗೆದ್ದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಿಸ್ಬಾ, ಬಹುಶಃ ಹವಾಮಾನ ಪರಿಸ್ಥಿತಿಗಳಿಂದಾಗಿ, ಈ ಸಮಯದಲ್ಲಿ ಪಿಚ್‌ಗಳು ಪಾಕಿಸ್ತಾನದಲ್ಲಿ ಸಾಮಾನ್ಯಕ್ಕಿಂತ ಸ್ವಲ್ಪ ಭಿನ್ನವಾಗಿರಬಹುದು ಎಂದರು.
"ಈ ಸರಣಿಯ ಕಡೆಯ ಎರಡೂ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ಕಷ್ಟಪಟ್ಟಿದ್ದಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಸ್ಪಿನ್ನರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ ನಮ್ಮ ತಂಡ ಸ್ಪಿನ್ ವಿರುದ್ಧದ ಬ್ಯಾಟಿಂಗ್ನಲ್ಲಿ ಸುಧಾರಿಸಬೇಕಾಗಿದೆ ಎಂದರು.
ಓದಿ : ಜಾತಿ ನಿಂದನೆ ಆರೋಪ :ಯುವರಾಜ್ ಸಿಂಗ್ ವಿರುದ್ಧ FIR ದಾಖಲು
"ನಾವು ಸ್ಪಿನ್ ಬೌಲರ್ಗಳಿಗೆ ಉತ್ತಮವಾಗಿ ಆಡುತ್ತಿಲ್ಲ. ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ನಾವು ಉತ್ತಮ ಪ್ರದರ್ಶನ ನೀಡಬೇಕಾದರೆ ನಾವು ಸ್ಪಿನ್ ಬೌಲರ್ಗಳಿಗೆ ಉತ್ತಮವಾಗಿ ಆಡಲು ಕಲಿಯಬೇಕಾಗಿದೆ " ಎಂದು ಅವರು ಹೇಳಿದರು. ಇನ್ನೂ ಟಿ- 20 ವಿಶ್ವಕಪ್ಗೆ ಹಿರಿಯರಾದ ಶೋಯೆಬ್ ಮಲಿಕ್ ಮತ್ತು ಮುಹಮ್ಮದ್ ಹಫೀಜ್ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಸುಳಿವು ನೀಡಿದರು.