ಕರ್ನಾಟಕ

karnataka

By

Published : Aug 6, 2020, 5:13 PM IST

Updated : Aug 6, 2020, 10:45 PM IST

ETV Bharat / sports

ಒಂದೇ ಒಂದು ಕೊರೊನಾ ಪಾಸಿಟಿವ್​ ಕೇಸ್​ ಇಡೀ ಟೂರ್ನಿಯನ್ನೇ ಅಂತ್ಯಗೊಳಿಸಲಿದೆ: ನೆಸ್ ವಾಡಿಯಾ

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ ದುಬೈನಲ್ಲಿ ಆಯೋಜನೆಗೊಂಡಿದ್ದು, ಯಾವುದೇ ಕಾರಣಕ್ಕೂ ಕೊರೊನಾ ಸೋಂಕು ಬಾರದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ ಎಂದು ನೆಸ್​ ವಾಡಿಯಾ ತಿಳಿಸಿದ್ದಾರೆ.

ನೆಸ್ ವಾಡಿಯಾ
ನೆಸ್ ವಾಡಿಯಾ

ಮುಂಬೈ: ಯುಎಇನಲ್ಲಿ ಆಯೋಜನೆಗೊಂಡಿರುವ 13ನೇ ಆವೃತ್ತಿಯ ಐಪಿಎಲ್ ಟೂರ್ನಮೆಂಟ್​​ನಲ್ಲಿ​ ಒಂದೇ ಒಂದು ಕೋವಿಡ್-19 ಪ್ರಕರಣ ಕಂಡು ಬಂದರೂ ಸಂಪೂರ್ಣ ಆವೃತ್ತಿ ರದ್ಧುಗೊಳ್ಳುವ ಸಾಧ್ಯತೆ ಇದ್ದು, ಆ ರೀತಿಯ ಘಟನೆ ನಡೆಯದಂತೆ ಗಮನ ಹರಿಸಬೇಕಾಗಿದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.

ಸೆಪ್ಟೆಂಬರ್​ 19ರಿಂದ ಆರಂಭಗೊಳ್ಳಲಿರುವ ಐಪಿಎಲ್​ಗೆ ತಯಾರಿ ನಡೆಸುತ್ತಿರುವ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ಮಾಲೀಕ ನೆಸ್​ ವಾಡಿಯಾ, ಐಪಿಎಲ್​ ಪ್ರಾಯೋಜಕತ್ವದ ಮೇಲಿನ ಊಹಾಪೋಹಗಳ ಬಗ್ಗೆ ಮಾತನಾಡುವುದಕ್ಕಿಂತ, ಟೂರ್ನಿ ವೇಳೆ ಕೋವಿಡ್​ ಕೇಸ್​​ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಈ ಬಾರಿಯ ಐಪಿಎಲ್​ ಪ್ರಾಯೋಜಕತ್ವದಿಂದ ಚೀನಾದ ಮೊಬೈಲ್​ ತಯಾರಿಕ ಕಂಪನಿ ವಿವೋ ಹಿಂದೆ ಸರಿದಿದ್ದು, ಬಿಸಿಸಿಐ ಅಧಿಕೃತವಾಗಿ ಖಚಿತಪಡಿಸಿದೆ. " ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ವಿವೋ ಕಂಪನಿ ಹಿಂದಕ್ಕೆ ಸರಿಯುತ್ತಿರುವ ಬಗ್ಗೆ ಊಹಾಪೋಹಗಳು ಎದಿದ್ದು, ಇದೊಂದು ಹಾಸ್ಯಾಸ್ಪದ ಅನ್ನಿಸುತ್ತಿದೆ. ಐಪಿಎಲ್​ ನಡೆಯುತ್ತದೆ ಎನ್ನುವುದು ನಮಗೆ ಗೊತ್ತಿದೆ. ಐಪಿಎಲ್​ನಲ್ಲಿ ತನ್ನ ಭವಿಷ್ಯವನ್ನು ಲೆಕ್ಕಿಸದೆ ಚೀನಾ ಕಂಪನಿ ಒಂದು ವೇಳೆ ಪ್ರಾಯೋಕತ್ವದಿಂದ ಹಿಂದೆ ಸರಿದರೆ ಬೇರೆ ಕಂಪನಿಗಳ ಪ್ರಾಯೋಜಕತ್ವದ ಅಗತ್ಯವಿರುತ್ತದೆ ಎಂದರು.

ಇನ್ನು ಟೈಟಲ್ ಪ್ರಾಯೋಜಕತ್ವದಲ್ಲಿ ಬಿಸಿಸಿಐ ನಿರ್ಧಾರದ ಬಗ್ಗೆ ನಮಗೇನು ತಿಳಿದಿಲ್ಲ. ಆದರೆ ಈ ಸಂದರ್ಭದಲ್ಲಿ ನಾವೆಲ್ಲರೂ ಬಿಸಿಸಿಐ ಬೆಂಬಲಕ್ಕೆ ನಿಲ್ಲುತ್ತೇವೆ.ಅದಕ್ಕಾಗಿ ಶೀಘ್ರದಲ್ಲಿ ಮತ್ತೆ ಸಭೆ ನಡೆಸಲಾಗುವುದು ಎಂದರು.

ಇನ್ನು ಐಪಿಎಲ್ ಟೂರ್ನಮೆಂಟ್​ ಯಾವುದೇ ಅಡೆ-ತಡೆಗಳಿಲ್ಲದೆ ನಡೆಸಲು ಬಿಸಿಸಿಐ 16 ಪುಟಗಳ ಮಾರ್ಗಸೂಚಿಗಳನ್ನ ಎಲ್ಲ ಪ್ರಾಂಚೈಸಿಗಳಿಗೆ ರವಾನೆ ಮಾಡಿದೆ. ಐಪಿಎಲ್​ಗಾಗಿ ಯುಎಇಗೆ ಭೇಟಿ ನೀಡುವ ಬಗ್ಗೆ ನಿರ್ಧಾರ ಮಾಡಿಲ್ಲ. ಆದರೆ ಸುರಕ್ಷತೆ ಬಗ್ಗೆ ಯಾವುದೇ ರಾಜಿ ಇಲ್ಲ. ಏಕೆಂದರೆ ಟೂರ್ನಿಯ ವೇಳೆ ಒಂದೇ ಒಂದು ಕೋವಿಡ್-19 ಪ್ರಕರಣ ಕಂಡುಬಂದರೂ ಐಪಿಎಲ್ ರದ್ದಾಗುವ ಸಾಧ್ಯತೆಯಿದೆ. ಅದಕ್ಕಾಗಿ ಇಂತಹ ಘಟನೆ ನಡೆಯದಂತೆ ಗಮನಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

Last Updated : Aug 6, 2020, 10:45 PM IST

ABOUT THE AUTHOR

...view details