ಕರ್ನಾಟಕ

karnataka

ETV Bharat / sports

2005 ಆಗಸ್ಟ್​ 11: ಆಸೀಸ್​ ಲೆಜೆಂಡ್​ ಶೇನ್​ ವಾರ್ನ್​ರ 600 ವಿಕೆಟ್​ಗಳ ದಾಖಲೆಗೆ 15 ವರ್ಷ - Australian spinner Shane Warne re

ಆಗಸ್ಟ್​ 11 2005ರಲ್ಲಿ ಮ್ಯಾಂಚೆಸ್ಟರ್​ನ ಎಮಿರೇಟ್ಸ್​ ಓಲ್ಡ್​ ಟ್ರಾಫರ್ಡ್​ನಲ್ಲಿ ನಡೆದಿದ್ದ ಆ್ಯಶಸ್​ ಟೆಸ್ಟ್​ ಸರಣಿಯ 3ನೇ ಟೆಸ್ಟ್​ನಲ್ಲಿ ವಾರ್ನ್​ ಈ ಸಾಧನೆ ಮಾಡಿದ್ದರು.

ಶೇನ್​ ವಾರ್ನ್​  600 ವಿಕೆಟ್
ಶೇನ್​ ವಾರ್ನ್​ 600 ವಿಕೆಟ್

By

Published : Aug 11, 2020, 6:17 PM IST

ನವದೆಹಲಿ:ಆಸ್ಟ್ರೇಲಿಯಾದ ಸ್ಪಿನ್​ ದಿಗ್ಗಜ ಶೇನ್​ ವಾರ್ನ್​ ಟೆಸ್ಟ್​ ಕ್ರಿಕೆಟ್​ನಲ್ಲಿ 600 ವಿಕೆಟ್​ಗಳ ದಾಖಲೆ ನಿರ್ಮಿಸಿ ಇಂದಿಗೆ 15 ವರ್ಷಗಳಾಗಿವೆ. ಆಸೀಸ್​ ಲೆಜೆಂಡ್​ ಇಂಗ್ಲೆಂಡ್​ ವಿರುದ್ಧ ಈ ಸಾಧನೆ ಮಾಡಿದ್ದರು.

ಆಗಸ್ಟ್​ 11 2005ರಲ್ಲಿ ಮ್ಯಾಂಚೆಸ್ಟರ್​ನ ಎಮಿರೇಟ್ಸ್​ ಓಲ್ಡ್​ ಟ್ರಾಫರ್ಡ್​ನಲ್ಲಿ ನಡೆದಿದ್ದ ಆ್ಯಶಸ್​ ಟೆಸ್ಟ್​ ಸರಣಿಯ 3ನೇ ಟೆಸ್ಟ್​ನಲ್ಲಿ ವಾರ್ನ್​ ಈ ಸಾಧನೆ ಮಾಡಿದ್ದರು.

3ನೇ ಟೆಸ್ಟ್​ನ ಮೊದಲ ದಿನ ವಾರ್ನ್​ ಇಂಗ್ಲೆಂಡ್​ ತಂಡದ ಮಾರ್ಕಸ್​ ಟ್ರೆಸ್ಕೋತಿಕ್​ ಅವರ ವಿಕೆಟ್​ ಪಡೆಯುವ ಮೂಲಕ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ 600 ವಿಕೆಟ್​ ಪಡೆದ ವಿಶ್ವದ ಮೊದಲ ಬೌಲರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು

ಮೊದಲ ಇನ್ನಿಂಗ್ಸ್​ನಲ್ಲಿ ವಾರ್ನ್​ 99 ರನ್​ ನೀಡಿ 4 ವಿಕೆಟ್​ ಪಡೆದಿದ್ದರು. ಇಂಗ್ಲೆಂಡ್​ ತಂಡ 444 ರನ್​ಗಳಿಗೆ ಆಲೌಟ್​ ಆಗಿತ್ತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 302 ರನ್​ಗಳಿಗೆ ಆಲೌಟ್​ ಆಗಿತ್ತು. ಆ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಕೂಡ ನಡೆಸಿದ್ದ ವಾರ್ನ್​ ಆಕರ್ಷಕ 90 ರನ್​ಗಳಿಸಿದ್ದರು. ಆದರೆ ಇವರ ಆಲ್​ರೌಂಡರ್ ಆಟ ಆಸ್ಟ್ರೇಲಿಯಾದ ಹಿನ್ನಡೆ ತಪ್ಪಿಸಲಾಗಲಿಲ್ಲ.

ಆ್ಯಶಸ್​ ಸರಣಿ 2005

ಇಂಗ್ಲೆಂಡ್​ ಎರಡನೇ ಇನ್ನಿಂಗ್ಸ್​ನಲ್ಲಿ 6 ವಿಕೆಟ್​ ಕಳೆದುಕೊಂಡು 280ರನ್​ಗಳಿಗೆ ಡಿಕ್ಲೇರ್​ ಘೋಷಿಸಿಕೊಂಡು ಆಸ್ಟ್ರೆಲಿಯಾಕ್ಕೆ 423 ರನ್​ಗಳ ಟಾರ್ಗೆಟ್​ ನೀಡಿತ್ತು. ಈ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ರಿಕಿ ಪಾಂಟಿಗ್​(156) ಅವರ ಶತಕದ ನೆರವಿನಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ಕ್ರಿಕೆಟ್​ ಇತಿಹಾಸದ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರಾಗಿರುವ ವಾರ್ನ್​ 700 ವಿಕೆಟ್​ ಪಡೆದ ಮೊದಲ ಬೌಲರ್​ ಕೂಡ ಆಗಿದ್ದಾರೆ. ಒಟ್ಟಾರೆ 708 ವಿಕೆಟ್​ ಪಡೆದಿರುವ ಅವರು ಗರಿಷ್ಟ ವಿಕೆಟ್​ ಪಡೆದಿರುವ ಬೌಲರ್​ಗಳಲ್ಲಿ ಶ್ರೀಲಂಕಾದ ಮುತ್ತಯ್ಯ ಮುರುಳೀದರನ್​(800) ನಂತರದ ಸ್ಥಾನದಲ್ಲಿದ್ದಾರೆ.

ABOUT THE AUTHOR

...view details