ನವದೆಹಲಿ: 2015ರಲ್ಲಿ ಪ್ರಾರಂಭವಾದ ಟಿ-20 ಕ್ರಿಕೆಟ್ ಟೂರ್ನಿ ಕಡಿಮೆ ಸಮಯದಲ್ಲೇ ಹೆಚ್ಚು ಜನರನ್ನ ಆಕರ್ಷಿಸಿದೆ. ಕ್ರಿಕೆಟ್ನ ಇತರೆ ಮಾದರಿಗಳಿಗೆ ಹೋಲಿಸಿದರೆ ಟಿ-20 ಪಂದ್ಯಗಳನ್ನ ನೋಡಲು ಹೆಚ್ಚಿನ ಜನ ಮೈದಾನಕ್ಕೆ ಆಗಮಿಸುತ್ತಾರೆ.
ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ಗೆ 15ರ ಹರೆಯ.. ಮೊದಲ ಆ ಪಂದ್ಯ ಗೆದ್ದವರೇ ಇವರು.. - ಮೊದಲ ಟಿ-20 ಕ್ರಿಕೆಟ್ ಪಂದ್ಯ
ಇಂದಿಗೆ ಸರಿಯಾಗಿ 15 ವರ್ಷದ ಹಿಂದೆ ಅಂದರೆ 2005ರ ಫೆಬ್ರವರಿ 17ರಂದು ಆಷ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ಮೊದಲ ಅಂತಾರಾಷ್ಟ್ರೀಯ ಟಿ-20 ಪಂದ್ಯ ನಡೆದಿತ್ತು.
![ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ಗೆ 15ರ ಹರೆಯ.. ಮೊದಲ ಆ ಪಂದ್ಯ ಗೆದ್ದವರೇ ಇವರು.. first men's T20 latest news,ಮೊದಲ ಟಿ-20 ಕ್ರಿಕೆಟ್ ಪಂದ್ಯ](https://etvbharatimages.akamaized.net/etvbharat/prod-images/768-512-6100713-thumbnail-3x2-brm.jpg)
ಇಂದಿಗೆ ಸರಿಯಾಗಿ 15 ವರ್ಷದ ಹಿಂದೆ ಅಂದರೆ 2005ರ ಫೆಬ್ರವರಿ 17ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ಮೊದಲ ಅಂತಾರಾಷ್ಟ್ರೀಯ ಟಿ-20 ಪಂದ್ಯ ನಡೆದಿತ್ತು. ನ್ಯೂಜಿಲ್ಯಾಂಡ್‌ನ ಆಕ್ಲೆಂಡ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಕಾಂಗರೂ ಪಡೆ 5 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ದ ಆಸೀಸ್ ಆಟಗಾರ ರಿಕಿ ಪಾಂಟಿಂಗ್ 55 ಎಸೆತಗಳಲ್ಲಿ 98 ರನ್ ಸಿಡಿಸಿದ್ದರು.
ಆಸ್ಟ್ರೇಲಿಯಾ ನೀಡಿದ್ದ 215 ರನ್ಗಳ ಗುರಿ ಬೆನ್ನತ್ತಿದ್ದ ಆತಿಥೇಯ ಕಿವೀಸ್ ಪಡೆ 170 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆಸೀಸ್ ಪರ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ರಿಕಿ ಪಾಂಟಿಗ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.