ನವದೆಹಲಿ: ಇಂಗ್ಲೆಂಡ್ ವಿರುದ್ಧ ಶುಕ್ರವಾರ 2ನೇ ಏಕದಿನ ಪಂದ್ಯದಲ್ಲಿ ಸೋಲುಂಡ ನಂತರ ಭಾರತ ತಂಡ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದ್ದರೆ, ಗೆದ್ದ ಆಂಗ್ಲರ ತಂಡ ಅಗ್ರಸ್ಥಾನಕ್ಕೇರಿದೆ.
ಸೂಪರ್ ಲೀಗ್ನಲ್ಲಿ ಭಾರತ 5 ಪಂದ್ಯಗಳನ್ನಾಡಿದೆ. 2ರಲ್ಲಿ ಗೆಲುವು ಮತ್ತು 3ರಲ್ಲಿ ಸೋಲು ಕಂಡಿದೆ. ಈ ಮೂಲಕ 19 ಅಂಕ ಪಡೆದಿದೆ. ನಿಧಾನಗತಿಯ ಓವರ್ ರೇಟ್ನಿಂದ ಒಂದು ಅಂಕವನ್ನು ಭಾರತ ಕಳೆದುಕೊಂಡಿದೆ.
ಇನ್ನು, ಎದುರಾಳಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾದಷ್ಟೇ 40 ಅಂಕಗಳನ್ನ ಹೊಂದಿದ್ದರೂ, ರನ್ ರೇಟ್ನಲ್ಲಿ ಮುಂದಿರುವ ಕಾರಣ ಅಗ್ರಸ್ಥಾನ ಪಡೆದಿದೆ. ನ್ಯೂಜಿಲ್ಯಾಂಡ್ ಮತ್ತು ಆಫ್ಘಾನಿಸ್ಥಾನ ತಂಡಗಳು ತಲಾ 30 ಅಂಕಗಳನ್ನು ಹೊಂದಿದ್ದು, 3 ಮತ್ತು 4ನೇ ಸ್ಥಾನ ಪಡೆದಿವೆ.
ಬಾಂಗ್ಲಾದೇಶ(30), ವೆಸ್ಟ್ ಇಂಡೀಸ್(30), ಪಾಕಿಸ್ತಾನ(20) 5,6 ಮತ್ತು 7ನೇ ಸ್ಥಾನದಲ್ಲಿದ್ದರೆ, ಜಿಂಬಾಬ್ವೆ,ಐರ್ಲೆಂಡ್ ಮತ್ತು ಶ್ರೀಲಂಕಾ 9,10 ಮತ್ತು11ನೇ ಸ್ಥಾನ ಪಡೆದಿವೆ.
ಏಕದಿನ ಸೂಪರ್ ಲೀಗ್ನಲ್ಲಿ 13 ತಂಡಗಳು ಸ್ಪರ್ಧಿಸಲಿವೆ. ಇವುಗಳಲ್ಲಿ 2023ರ ವಿಶ್ವಕಪ್ಗೆ ಅಂಕಪಟ್ಟಿಯಲ್ಲಿನ ಅಗ್ರ 7 ತಂಡಗಳು ನೇರ ಅರ್ಹತೆ ಪಡೆದುಕೊಂಡರೆ, ಅತಿಥೇಯ ಭಾರತ ಈಗಾಗಲೇ ವಿಶ್ವಕಪ್ ಅಯೋಜಿಸುವ ಹಕ್ಕನ್ನು ಹೊಂದಿರುವುದಕ್ಕೆ ನೇರ ಅರ್ಹತೆ ಪಡೆದಿದೆ.
ಅಂಕಪಟ್ಟಿಯಲ್ಲಿ ಉಳಿದ 5 ತಂಡಗಳು ಕ್ವಾಲಿಫೈಯರ್ ಮೂಲಕ ಟೂರ್ನಿಗೆ ಪ್ರವೇಶ ಪಡೆಯಲಿವೆ. ಪ್ರತಿ ತಂಡ 8 ಎದುರಾಳಿಗಳೊಂದಿಗೆ ತಲಾ 3 ಪಂದ್ಯಗಳನ್ನಾಡಲಿದೆ. ಅಂದರೆ 24 ಪಂದ್ಯಗಳನ್ನಾಡಲಿದೆ. 4 ಸರಣಿ ತವರಿನಲ್ಲಿಯೂ 4 ಸರಣಿ ವಿದೇಶದಲ್ಲಿಯೂ ನಡೆಯಲಿದೆ. ಪ್ರತಿ ಪಂದ್ಯ ಗೆದ್ದರೆ 10 ಅಂಕ ದೊರೆಯಲಿದೆ. ಟೈ ರದ್ಧಾದರೆ ತಲಾ 5 ಅಂಕ ಪಡೆಯಲಿವೆ.
ಇದನ್ನು ಓದಿ:ಅತೀ ಸುರಕ್ಷಿತ ಆಟ 2023ರ ವಿಶ್ವಕಪ್ನಲ್ಲಿ ಭಾರತಕ್ಕೆ ಮುಳುವಾಗುತ್ತದೆ : ವಾನ್-'ರ್ನ್'