ಕರ್ನಾಟಕ

karnataka

ETV Bharat / sports

ನ್ಯೂಜಿಲ್ಯಾಂಡ್​​​​​​ನಲ್ಲಿ ಜನಾಂಗೀಯ ನಿಂದನೆಗೊಳಗಾದ ಆರ್ಚರ್​... ಕ್ಷಮೆಯಾಚಿಸಿದ ಕಿವೀಸ್​ ಕ್ರಿಕೆಟ್​ ಬೋರ್ಡ್​ - ಕಿವೀಸ್-ಇಂಗ್ಲೆಂಡ್​ ಟೆಸ್ಟ್​ ಜನಾಂಗೀಯ ನಿಂದನೆಗೊಳಗಾದ ಆರ್ಚರ್

ಇಂಗ್ಲೆಂಡ್‌ನ ಯುವ ವೇಗಿ ಜೋಫ್ರ ಆರ್ಚರ್ ಔಟಾಗಿ ಪೆವಿಲಿಯನ್​ನತ್ತ ನಡೆದು ಹೋಗಬೇಕಾದರೆ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕನೊಬ್ಬ ಆರ್ಚರ್​ ಬಣ್ಣ ಮತ್ತು ಚರ್ಮವನ್ನು ಕುರಿತು ಅಸಹ್ಯವಾಗಿ ಮಾತನಾಡಿದ್ದು, ಬೇಸರ ತಂದಿದೆ ಎಂದು ಆರ್ಚರ್​ ಟ್ವೀಟ್​ ಮಾಡಿ ನೋವು ತೋಡಿಕೊಂಡಿದ್ದಾರೆ.

NZC offer apology
NZC offer apology to arfcher

By

Published : Nov 26, 2019, 1:29 PM IST

ಹ್ಯಾಮಿಲ್ಟನ್​: ಕಿವೀಸ್​ ವಿರುದ್ಧದ ಟೆಸ್ಟ್​ ಪಂದ್ಯದ ವೇಳೆ, ವೀಕ್ಷಕನೊಬ್ಬನಿಂದ ಇಂಗ್ಲೆಂಡ್​ ವೇಗಿ ಜೋಫ್ರ ಆರ್ಚರ್​ ಜನಾಂಗೀಯ ನಿಂದನೆಗೆ ಗುರಿಯಾಗಿರುವ ಘಟನೆ ನಡೆದಿದೆ.

ಇಂಗ್ಲೆಂಡ್‌ನ ಯುವ ವೇಗಿ ಜೋಫ್ರ ಆರ್ಚರ್ ಔಟಾಗಿ ಪೆವಿಲಿಯನ್​ನತ್ತ ನಡೆದು ಹೋಗಬೇಕಾದರೆ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕನೊಬ್ಬ ಆರ್ಚರ್​ ಬಣ್ಣ ಮತ್ತು ಚರ್ಮವನ್ನು ಕುರಿತು ಅಸಹ್ಯವಾಗಿ ಮಾತನಾಡಿದ್ದು, ಬೇಸರ ತಂದಿದೆ ಎಂದು ಆರ್ಚರ್​ ಟ್ವೀಟ್​ ಮಾಡಿ ನೋವು ತೋಡಿಕೊಂಡಿದ್ದಾರೆ.

ಜೋಫ್ರಾ ಆರ್ಚರ್ ಜನಾಂಗೀಯ ನಿಂದನೆ ಆರೋಪ ಮಾಡುತ್ತಿದ್ದಂತೆಯೇ ನ್ಯೂಜಿಲ್ಯಾಂಡ್​ ಕ್ರಿಕೆಟ್​ ಬೋರ್ಡ್​ ಹಾಗೂ ಕಿವೀಸ್​ ನಾಯಕ ಕೇನ್​ ವಿಲಿಯಮ್ಸನ್ ಆರ್ಚರ್ ಬಳಿ​ ಕ್ಷಮೆ ಕೇಳಿದ್ದಾರೆ. ಇನ್ಮುಂದೆ ಇಂತಹ ಘಟನೆ ಕಿವೀಸ್​ ನೆಲದಲ್ಲಿ ನಡೆಯದಂತೆ ನೋಡಿಕೊಳ್ಳುತ್ತೇವೆ. ಇಂತಹ ಘಟನೆಗಳನ್ನು ಕಿವೀಸ್​ ಖಂಡಿಸುತ್ತದೆ. ನಿಂದನೆ ಮಾಡಿರುವ ವ್ಯಕ್ತಿಯನ್ನು ಸಿಸಿಟಿವಿಯಲ್ಲಿ ಪತ್ತೆ ಹಚ್ಚಿ ಸೂಕ್ತ ತನಿಖೆ ನಡೆಸಲಾಗುವುದು ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ತಿಳಿಸಿದೆ. ಅಲ್ಲದೇ ಮುಂದಿನ ಪಂದ್ಯಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದೆ.

ನ್ಯೂಜಿಲ್ಯಾಂಡ್‌ನ ಬೇ ಓವಲ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್‌ ಹಾಗೂ 65 ರನ್‌ ಅಂತರದಿಂದ ಶರಣಾಗಿತ್ತು.

ABOUT THE AUTHOR

...view details