ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಮಿಲ್ಟನ್ನ ಸೆಡ್ಡಾನ್ ಪಾರ್ಕ್ನಲ್ಲಿ 1000 ರನ್ ಪೂರೈಸಿದ ವಿಶ್ವದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಸೆಡ್ಡಾನ್ ಪಾರ್ಕ್ನಲ್ಲಿ ರಾಸ್ ಟೇಲರ್ ಮತ್ತು ವಿಲಿಯಮ್ಸನ್ ಬಿಟ್ಟರೆ ಬೇರಾವುದೇ ಬ್ಯಾಟ್ಸ್ಮನ್ 1000 ರನ್ ಗಳಿಸಿಲ್ಲ. ಟೀಮ್ ಇಂಡಿಯಾದ ಮಾಜಿ ನಾಯಕ ದ್ರಾವಿಡ್ ಮಾತ್ರ ಈ ಕ್ರೀಡಾಂಗಣದಲ್ಲಿ ಗರಿಷ್ಠ ರನ್ಗಳಿಸಿದ ಬ್ಯಾಟ್ಸ್ಮನ್ಗಳ ಟಾಪ್ 10ರಲ್ಲಿರುವ ವಿದೇಶಿ ಬ್ಯಾಟ್ಸ್ಮನ್ ಆಗಿದ್ದಾರೆ. ಅವರು 3 ಪಂದ್ಯಗಳಿಂದ 2 ಶತಕ ಹಾಗೂ ಒಂದು ಅರ್ಧಶತಕದ ಸಹಿತ 415 ರನ್ಗಳಿಸಿದ್ದಾರೆ.
ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭದಲ್ಲೇ ವಿಲ್ ಯಂಗ್ ವಿಕೆಟ್ ಪಡೆದು ಮುನ್ನಡೆ ಸಾಧಿಸಿದರು. ಮ್ಯಾಚ್ ಸಾಗುತ್ತಿದ್ದಂತೆ ಕಿವೀಸ್ ಪ್ರಾಬಲ್ಯ ಸಾಧಿಸಿತು. ಲ್ಯಾಥಮ್ ಹಾಗೂ ವಿಲಿಯಮ್ಸನ್ 2ನೇ ವಿಕೆಟ್ಗೆ 154 ರನ್ಗಳ ಜೊತೆಯಾಟ ನೀಡಿದರು.
ಲ್ಯಾಥಮ್ 184 ಎಸೆತಗಳಲ್ಲಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 86 ರನ್ಗಳಿಸಿ ಕೆಮೆರ್ ರೋಚ್ಗೆ ವಿಕೆಟ್ ಒಪ್ಪಿಸಿದರು. ಆದರೆ ವಿಲಿಯಮ್ಸನ್ ಮತ್ತು ಟೇಲರ್ ಮುರಿಯದ 3ನೇ ವಿಕೆಟ್ಗೆ 75 ರನ್ ಸೇರಿಸಿ 2ನೇ ದಿನದಾಟಕ್ಕೆ ಆಟ ಮುಂದುವರೆಸಿದ್ದಾರೆ. ವಿಲಿಯಮ್ಸನ್ 219 ಎಸೆತಗಳಲ್ಲಿ 16 ಬೌಂಡರಿ ಸಹಿತ 97 ರನ್, ಟೇಲರ್ 61 ಎಸೆತಗಳಲ್ಲಿ 5 ಬೌಂಡರಿ ಸಹಿತ 31 ರನ್ಗಳಿಸಿದ್ದಾರೆ.