ಬೆಂಗಳೂರು: ರಣಜಿ ಪಂದ್ಯದ ವೇಳೆ ಗಾಯಗೊಂಡಿದ್ದ ಭಾರತ ತಂಡದ ವೇಗಿ ಇಶಾಂತ್ ಶರ್ಮಾ ಸಂಪೂರ್ಣ ಫಿಟ್ ಆಗಿದ್ದು ಕಿವೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡ ಅನುಭವಿ ವೇಗಿ ಫುಲ್ಫಿಟ್: ಟೀಂ ಇಂಡಿಯಾಗೆ ಬಂತು ಆನೆ ಬಲ - ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ ಇಶಾಂತ್
ಭಾರತ ತಂಡ ಅನುಭವಿ ವೇಗಿ ಶನಿವಾರ ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ದು ವೆಲ್ಲಿಂಗ್ಟನ್ ಪಂದ್ಯದ ವೇಳೆ ತಂಡ ಸೇರಿಕೊಳ್ಳಲಿದ್ದಾರೆ.
ಇಶಾಂತ್ ಶರ್ಮಾ
ಜನವರಿ 26ರಂದು ಇಮ್ಮಡಿ ಗಾಯಗೊಂಡ ನಂತರ ನನಗೆ ರೋಲರ್ ಕಾಸ್ಟರ್ ರೈಡ್ ಮಾಡಿಸಲಾಗಿತ್ತು. ಆಶಿಷ್ ಕೌಶಿಕ್ ಅವರ ಸಹಾಯದಿಂದ ಯಶಸ್ವಿಯಾಗಿ ಆ ರೈಡ್ ಮುಗಿಸಿದ್ದೇನೆ, ಸ್ಕ್ಯಾನ್ಗೆ ಒಳಗಾಗುವಾಗ ಸ್ವಲ್ಪ ಭಯವಿತ್ತು. ಆದರೆ ಈಗ ಸಂಪೂರ್ಣ ಫಿಟ್ ಆಗಿರುವುದು ಖುಷಿ ತಂದಿದೆ ಎಂದು ಟ್ವೀಟ್ ಮೂಲಕ ತಾವು ಫಿಟ್ ಆಗಿರುವ ವಿಷಯವನ್ನು ಅವರು ತಿಳಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಆಡಲಿದೆ. ಫೆಬ್ರವರಿ 21 ರಂದು ವೆಲ್ಲಿಂಗ್ಟನ್ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ.