ಆಕ್ಲೆಂಡ್:ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ತಮ್ಮ ಪ್ರಮುಖ ಆಟಗಾರರಿಲ್ಲದೆ ಏಕದಿನ ಸರಣಿಯನ್ನು ಆಡುತ್ತಿದ್ದು, ಉಭಯ ತಂಡಗಳೂ ಗಾಯಾಳುಗಳ ಸಮಸ್ಯೆ ಎದುರಿಸುತ್ತಿವೆ.
ಶನಿವಾರ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡದ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಬದಲಿ ಆಟಗಾರರು ಯಾರೂ ಇಲ್ಲದ ಕಾರಣ ಕಿವೀಸ್ ತಂಡದ ತರಬೇತುದಾರ ಲ್ಯೂಕ್ ರೊಂಚಿ 2 ಓವರ್ಗಳ ಕಾಲ ಫೀಲ್ಡಿಂಗ್ ನಡೆಸಿದ್ದಾರೆ.
37ನೇ ಓವರ್‌ನಲ್ಲಿ ಫೀಲ್ಡರ್ಗಳ ಅಗತ್ಯವಿದ್ದಾಗ, ರೊಂಚಿ ಕಿವೀಸ್ ಜರ್ಸಿ ಧರಿಸಿ ಮೈದಾನಕ್ಕಿಳಿದು 2 ಓವರ್ಗಳ ಕಾಲ ಫೀಲ್ಡಿಂಗ್ ಮಾಡಿದ್ದಾರೆ. ಈ ವೇಳೆ ನವದೀಪ್ ಸೈನಿ ಬಾರಿಸಿದ ಚೆಂಡು ರೊಂಚಿ ಸಮೀಪಕ್ಕೆ ಬಂದಿತ್ತು.
ವೇಗಿಗಳಾದ ಟ್ರೆಂಟ್ ಬೌಲ್ಟ್ ಮತ್ತು ಲಾಕಿ ಫರ್ಗುಸನ್ ಅವರ ದೀರ್ಘಾವಧಿಯ ಗಾಯಗಳ ಹೊರತಾಗಿ, ನ್ಯೂಜಿಲೆಂಡ್ 4ನೇ ಟಿ-20 ಪಂದ್ಯದಿಂದ ವಿಲಿಯಮ್ಸನ್ ಕೂಡ ಲಭ್ಯರಿಲ್ಲ. ವೇಗಿ ಸ್ಕಾಟ್ ಕುಗ್ಲೇಜಿನ್ ಕೂಡ ಜ್ವರದಿಂದ ಬಳಲುತಿದ್ದಾರೆ, ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಹೊಟ್ಟೆ ನೋವಿನಿಂದ ಬಳಲುತಿದ್ದಾರೆ. ಇಷ್ಟೆಲ್ಲ ಪ್ರಮುಖ ಆಟಗಾರರ ಅಲಭ್ಯತೆಯ ಹೊರತಾಗಿಯೂ ನ್ಯೂಜಿಲ್ಯಾಂಡ್ ತಂಡ 3 ಪಂದ್ಯಗಳ ಏಕದಿನ ಸರಣಿಲ್ಲಿ 2-0 ಅಂತರದಲ್ಲಿ ಮೇಲುಗೈ ಸಾಧಿಸಿದೆ.