ಕರ್ನಾಟಕ

karnataka

ETV Bharat / sports

ಇಂಡಿಯಾ ವರ್ಸಸ್​​ ನ್ಯೂಜಿಲ್ಯಾಂಡ್​​ ​: ಏಕದಿನ ಸರಣಿಗಾಗಿ 15 ಸದಸ್ಯರ ಕಿವೀಸ್​ ಪಡೆ ಪ್ರಕಟ - Team India

ಟೀಂ ಇಂಡಿಯಾ ವಿರುದ್ಧದ ಏಕದಿನ ಕ್ರಿಕೆಟ್​ ಸರಣಿಗಾಗಿ ನ್ಯೂಜಿಲ್ಯಾಂಡ್​​ ತಂಡ ಪ್ರಕಟಗೊಂಡಿದ್ದು, ಕೆಲವೊಂದು ಮಹತ್ವದ ಬದಲಾವಣೆಗಳೊಂದಿಗೆ ತಂಡ ಕಣಕ್ಕಿಳಿಯಲಿದೆ.

NZ vs IND
ಇಂಡಿಯಾ ವರ್ಸಸ್​​ ನ್ಯೂಜಿಲೆಂಡ್

By

Published : Jan 30, 2020, 4:03 PM IST

ಕ್ರೈಸ್ಟ್‌ಚರ್ಚ್​​:ಟೀಂ ಇಂಡಿಯಾ ವಿರುದ್ಧದ ಏಕದಿನ ಸರಣಿಗಾಗಿ ನ್ಯೂಜಿಲ್ಯಾಂಡ್​​ ತಂಡ ಪ್ರಕಟಗೊಂಡಿದ್ದು, ಈಗಾಗಲೇ ಟಿ-20 ಸರಣಿ ಕೈಚೆಲ್ಲಿರುವ ಕಿವೀಸ್​ ಪಡೆ ಕೆಲವೊಂದು ಮಹತ್ವದ ಬದಲಾವಣೆಗಳೊಂದಿಗೆ ತಂಡ ಕಣಕ್ಕಿಳಿಯಲಿದೆ.

ಯುವ ವೇಗದ ಬೌಲರ್‌ ಕೈಲ್‌ ಜೇಮಿಸನ್

15 ಸದಸ್ಯರನ್ನೊಳಗೊಂಡ ತಂಡವನ್ನ ನ್ಯೂಜಿಲ್ಯಾಂಡ್​​ ಕ್ರಿಕೆಟ್‌ ಮಂಡಳಿ ಮೂರು ಏಕದಿನ ಪಂದ್ಯಗಳಿಗಾಗಿ ಪ್ರಕಟಗೊಳ್ಳಿಸಿದ್ದು, ತಂಡದಲ್ಲಿ ಕೆಲ ಪ್ರಮುಖ ಪ್ಲೇಯರ್ಸ್​ಗೆ ಕೈಬಿಡಲಾಗಿದೆ. ಇದರ ಮಧ್ಯೆ ನ್ಯೂಜಿಲೆಂಡ್‌ 'A' ತಂಡದ ಪರ ಅದ್ಭುತ ಪ್ರದರ್ಶನ ನೀಡಿರುವ ಯುವ ವೇಗದ ಬೌಲರ್‌ ಕೈಲ್‌ ಜೇಮಿಸನ್​ ತಂಡಕ್ಕೆ ಸೇರಿಕೊಂಡಿದ್ದಾರೆ.

ನ್ಯೂಜಿಲೆಂಡ್ ತಂಡ ಪ್ರಕಟ

ನ್ಯೂಜಿಲ್ಯಾಂಡ್​ ತಂಡದ ವೇಗದ ಬೌಲರ್​ಗಳಾದ ಟ್ರೆಂಟ್‌ ಬೌಲ್ಟ್​​, ಲಾಕಿ ಫರ್ಗ್ಯೂಸನ್​ ಗಾಯಗೊಂಡಿರುವ ಕಾರಣ ತಂಡದಿಂದ ಹೊರಗುಳಿದಿದ್ದು, ಟಿಮ್‌ ಸೌಥೀ ಜತೆ ಸ್ಕಾಟ್‌ ಕುಗ್ಲೇಜಿನ್‌ ಮತ್ತು ಹ್ಯಾಮಿಶ್‌ ಬೆನೆಟ್‌ ಸಾಥ್​ ನೀಡಲಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 5ರಂದು ಶುರುವಾಗಲಿದ್ದು, ಮೊದಲ ಪಂದ್ಯ ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.

ಸರಣಿಗೆ ನ್ಯೂಜಿಲೆಂಡ್‌ ತಂಡ:

ಕೇನ್‌ ವಿಲಿಯಮ್ಸನ್​​ (ನಾಯಕ), ಹ್ಯಾಮಿಶ್‌ ಬೆನೆಟ್‌, ಟಾಮ್ ಬ್ಲಂಡಲ್‌, ಕಾಲಿನ್‌ ಡಿ'ಗ್ರ್ಯಾಂಡ್‌ಹೋಮ್‌, ಮಾರ್ಟಿನ್‌ ಗಪ್ಟಿಲ್‌, ಕೈಲ್‌ ಜೇಮಿಸನ್‌ (ಹೊಸ ಸೇರ್ಪಡೆ), ಸ್ಕಾಟ್‌ ಕುಗ್ಲೇಜಿನ್‌, ಟಾಮ್‌ ಲೇಥಮ್‌, ಜಿಮ್ಮಿ ನೀಶಮ್, ಹೆನ್ರಿ ನಿಕೋಲ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಇಶ್‌ ಸೋಧಿ, ಟಿಮ್‌ ಸೌಥೀ, ರಾಸ್‌ ಟೇಲರ್‌.

ಏಕದಿನ ಸರಣಿಗೆ ಭಾರತ ತಂಡ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಪೃಥ್ವಿ ಶಾ, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಕೇದಾರ್ ಜಾಧವ್.

ABOUT THE AUTHOR

...view details