ಕ್ರೈಸ್ಟ್ಚರ್ಚ್: ಸತತ 3ನೇ ತವರಿನ ಟೆಸ್ಟ್ ಸರಣಿ ಗೆದ್ದ ನ್ಯೂಜಿಲ್ಯಾಂಡ್ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ ಅರ್ಹತೆ ಪಡೆಯುವತ್ತ ಮತ್ತಷ್ಟು ಹತ್ತಿರ ಬಂದಿದೆ.
ಪಾಕಿಸ್ತಾನ ವಿರುದ್ಧ 2-0ಯಲ್ಲಿ ಸರಣಿ ಗೆದ್ದ ಬ್ಲಾಕ್ ಕ್ಯಾಪ್ಸ್ 420 ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಅಂಕಗಳಿಸಿಕೊಂಡಿದೆ. ಪಾಯಿಂಟ್ನಲ್ಲಿ ಗರಿಷ್ಠವಾಗಿದ್ದರೂ ಸರಾಸರಿ ಅಂಕ ಪಟ್ಟಿಯಲ್ಲಿ 70 ಅಂಕಗಳನ್ನು ಹೊಂದಿದ್ದು 3ನೇ ಸ್ಥಾನದಲ್ಲಿದೆ.
76.6 ಸರಾಸರಿ ಅಂಕ ಹೊಂದಿರುವ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಲ್ಲಿದ್ದರೆ, ಭಾರತ 72.2 ಸರಾಸರಿ ಅಂಕಗಳೊಂದಿದೆ 2ನೇ ಸ್ಥಾನದಲ್ಲಿದೆ. ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಎರಡು ಪಂದ್ಯಗಳು ಪ್ರಮುಖವಾಗಿದ್ದು, ಗೆಲ್ಲದಿದ್ದರೂ ಡ್ರಾ ಸಾಧಿಸಲಾದರೂ ಪ್ರಯತ್ನಿಸಬೇಕಾಗುವ ಅನಿವಾರ್ಯತೆ ಎದುರಾಗಿದೆ. ಆಸ್ಟ್ರೇಲಿಯಾ ವಿರುದ್ಧ ಡ್ರಾ ಸಾಧಿಸಿದರೆ ಭಾರತ ಫೈನಲ್ ಪ್ರವೇಶಿಸುವ ಕನಸು ಮತ್ತಷ್ಟು ಬಲಿಷ್ಠವಾಗಲಿದೆ. ಏಕೆಂದರೆ ಮುಂದಿನ ಸರಣಿ ಇಂಗ್ಲೆಂಡ್ ವಿರುದ್ಧ ಭಾರತದಲ್ಲೇ ನಡೆಯಲಿದೆ.
ಇಂಗ್ಲೆಂಡ್ ತಂಡಕ್ಕೂ ಕೂಡ ಇನ್ನು 2 ಸರಣಿ ಬಾಕಿಯುಳಿದಿದೆ. ಆದರೆ ಕೇವಲ 60.8 ಸರಾಸರಿ ಅಂಕ ಹೊಂದಿರುವುದರಿಂದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸುವುದು ಕಷ್ಟಸಾಧ್ಯವಾಗಿದೆ.
ಇದನ್ನು ಓದಿ:ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ ನ್ಯೂಜಿಲ್ಯಾಂಡ್