ಕರ್ನಾಟಕ

karnataka

ETV Bharat / sports

ಆಸೀಸ್​ ಪ್ರೇಕ್ಷಕರು ನನ್ನ ಧರ್ಮ, ಬಣ್ಣ ಗುರಿಯಾಗಿಸಿ ಹಲವು ಬಾರಿ ನಿಂದಿಸಿದ್ದಾರೆ : ಹರ್ಭಜನ್​ ಸಿಂಗ್​

ಆಸ್ಟ್ರೇಲಿಯಾದ ಪ್ರೇಕ್ಷಕರ ಅಜ್ಞಾನದ ವರ್ತನೆ ಇದೇ ಮೊದಲೇನಲ್ಲ. ನೀವು ಅವರನ್ನು ಹೇಗಿ ನಿಲ್ಲಿಸುತ್ತೀರಾ? ಎಂದು ಆಫ್‌ ಸ್ಪಿನ್ನರ್ ಆಗಿದ್ದ ಭಜ್ಜಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಶನಿವಾರ ಜಸ್ಪ್ರೀತ್ ಬುಮ್ರಾ ಮತ್ತು ಸಿರಾಜ್​ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಪ್ರೇಕ್ಷಕರು ನಿಂದಿಸಿದ್ದರ ಬಗ್ಗೆ ಬಿಸಿಸಿಐ, ಐಸಿಸಿಗೆ ವರದಿ ನೀಡಿತ್ತು..

By

Published : Jan 10, 2021, 9:59 PM IST

ಜನಾಂಗೀಯ ನಿಂದನೆ ಬಗ್ಗೆ ಹರ್ಭಜನ್ ಸಿಂಗ್ ಆಕ್ರೋಶ
ಜನಾಂಗೀಯ ನಿಂದನೆ ಬಗ್ಗೆ ಹರ್ಭಜನ್ ಸಿಂಗ್ ಆಕ್ರೋಶ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಪ್ರೇಕ್ಷಕರ ಒಂದು ಗುಂಪು ಭಾರತೀಯ ಆಟಗಾರರ ಮೇಲೆ ಜನಾಂಗೀಯ ನಿಂದನೆ ಮಾಡಿರುವುದನ್ನ ಭಾರತದ ಮಾಜಿ ಆಟಗಾರ ಹರ್ಭಜನ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ತಾವೂ ಆಸ್ಟ್ರೇಲಿಯಾದಲ್ಲಿ ಆಡುವಾಗ ಇಂತಹ ಹಲವಾರು ನಿಂದನೆಗಳನ್ನು ಎದುರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಫೀಲ್ಡಿಂಗ್ ಮಾಡುವಾಗ ನಾನು ಕೂಡ ವೈಯಕ್ತಿಕವಾಗಿ ಹಲವಾರು ಬಾರಿ ಇಂತಹ ಮಾತು ಕೇಳಿದ್ದೇನೆ. ಅವರು ನನ್ನನ್ನು, ನನ್ನ ಧರ್ಮವನ್ನು ಮತ್ತು ನನ್ನ ಬಣ್ಣದ ಮೇಲೆ ನಿಂದಿಸುತ್ತಿದ್ದರು.

ಆಸ್ಟ್ರೇಲಿಯಾದ ಪ್ರೇಕ್ಷಕರ ಅಜ್ಞಾನದ ವರ್ತನೆ ಇದೇ ಮೊದಲೇನಲ್ಲ. ನೀವು ಅವರನ್ನು ಹೇಗಿ ನಿಲ್ಲಿಸುತ್ತೀರಾ? ಎಂದು ಆಫ್‌ ಸ್ಪಿನ್ನರ್ ಆಗಿದ್ದ ಭಜ್ಜಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಶನಿವಾರ ಜಸ್ಪ್ರೀತ್ ಬುಮ್ರಾ ಮತ್ತು ಸಿರಾಜ್​ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಪ್ರೇಕ್ಷಕರು ನಿಂದಿಸಿದ್ದರ ಬಗ್ಗೆ ಬಿಸಿಸಿಐ, ಐಸಿಸಿಗೆ ವರದಿ ನೀಡಿತ್ತು.

ಆದರೆ, ಭಾನುವಾರವೂ ಕೂಡ ಪ್ರೇಕ್ಷಕರು ತಮ್ಮ ಅಸಭ್ಯ ವರ್ತನೆ ಮುಂದುವರಿಸಿದ್ದರಿಂದ ಪಂದ್ಯವನ್ನು 10 ನಿಮಿಷಗಳ ಕಾಲ ನಿಲ್ಲಿಸಿ ಅವರನ್ನು ಮೈದಾನದನಿಂದ ಹೊರ ಹಾಕಲಾಗಿತ್ತು.

ಇದನ್ನು ಓದಿ :ಇದು ಗೂಂಡಾ ವರ್ತನೆಯ ಪರಮಾವಧಿ: ಜನಾಂಗೀಯ ನಿಂದನೆ ವಿರುದ್ಧ ಕೊಹ್ಲಿ ಕೆಂಡ

ಮೈದಾನದಿಂದ ಹೊರ ಹಾಕಿದರೆ ಸಾಲದು, ಜನಾಂಗೀಯ ನಿಂದನೆ ವಿರುದ್ಧ ಶಾಶ್ವತ ಪರಿಹಾರ ಅಗತ್ಯ: ಗಂಭೀರ್​

ABOUT THE AUTHOR

...view details