ಮುಂಬೈ:ಭಾರತ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿರುವ ಗಾಯದ ಸಮಸ್ಯೆ ಅವರ ಕ್ರಿಕೆಟ್ ಕರಿಯರ್ಗೆ ಮುಳ್ಳಾಗುತ್ತಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದರು. ವೈದ್ಯಕೀಯ ಪರೀಕ್ಷೆ ವೇಳೆ ಅವರಿಗೆ ಸ್ಫೋರ್ಟ್ ಹಾರ್ನಿಯ ಇರುವುದು ಪತ್ತೆಯಾಗಿತ್ತು. ಗಾಯದಿಂದ ಚೇತರಿಸಿಕೊಂಡು ಕೇವಲ 2 ಪಂದ್ಯ ಆಡಿವಷ್ಟರಲ್ಲೇ ಸ್ಪೋರ್ಟ್ಸ್ ಹರ್ನಿಯಾಕ್ಕೆ ತುತ್ತಾದ್ದರಿಂದ ಅವರನ್ನು ಪರೀಕ್ಷಿಸಿದ್ದ ಎನ್ಸಿಎ ವಿರುದ್ಧ ಟೀಕೆ ಕೇಳಿ ಬಂದಿತ್ತು.
ತಮ್ಮಲ್ಲಿ ಸ್ಫೊರ್ಟ್ಸ್ ಹರ್ನಿಯಾ ಇರುವುದನ್ನು ಪತ್ತೆ ಹಚ್ಚದಿದ್ದಕ್ಕೆ ಎನ್ಸಿಎಯನ್ನು ದೂಷಿಸದ ಭುವಿ, ಕ್ರೀಡಾಪಡುಗಳಲ್ಲಿ ಗಾಯ ಸಾಮಾನ್ಯ, ಆದರೆ ಹರ್ನಿಯ (ಅಂಡವಾಯು) ಮೊದಲೇ ಪತ್ತೆಯಾಗದಿರುವುದಕ್ಕೆ ಸ್ವತಃ ತಾವೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವಕಪ್ಗೆ ಇನ್ನು 9 ತಿಂಗಳಿದೆ. ನಾನೀಗ ಅದರ ಬಗ್ಗೆ ಚಿಂತಿಸುತ್ತಿಲ್ಲ. ನನ್ನ ಮೊದಲ ಆದ್ಯತೆ ದೈಹಿಕವಾಗಿ ಸಂಪೂರ್ಣವಾಗಿ ಫಿಟ್ ಆಗಬೇಕಿರುವುದು. ಆದರೆ ನಾನು ಯಾವಾಗ ಫಿಟ್ ಆಗಬೇಕು ಎಂಬುದನ್ನು ಈಗಲೇ ಹೇಳುವುದಕ್ಕಾಗುವುದಿಲ್ಲ ಎಂದು ಭುವನೇಶ್ವರ್ ಹೇಳಿದ್ದಾರೆ.
ಗಾಯಗೊಂಡ ಆಟಗಾರರು ಎನ್ಸಿಎಗೆ ತೆರಳಬಹುದಾ ಎಂಬ ಪ್ರಶ್ನೆಗೆ ರಕ್ಷಣಾತ್ಮಕ ಉತ್ತರ ನೀಡಿದ ಭುವಿ, ಎನ್ಸಿಎ ಗೆ ತೆರಳಬೇಕಾ ಅಥವಾ ಬೇಡವಾ ಎಂಬುದು ಅವರವರ ವೈಯಕ್ತಿಕ ವಿಚಾರ ಎಂದಷ್ಟೇ ತಿಳಿಸಿದ್ದಾರೆ.
ಇನ್ನು ಟಿ20 ವಿಶ್ವಕಪ್ಗೆ ತಮಗೆ ದೀಪಕ್ ಚಹಾರ್ ಪ್ರತಿಸ್ಪರ್ಧಿಯ ಎಂಬುದಕ್ಕೆ ಪ್ರತಿಕ್ರಿಯಿಸಿದ ಭುವಿ, ನಾನು ಫಿಟ್ ಆದರೆ ಆಟದ ಕಡೆಗೆ ಮಾತ್ರ ಗಮನ ನೀಡುತ್ತೇನೆ, ತಂಡದ ಆಯ್ಕೆ ನನ್ನ ಕೈಯಲ್ಲಿಲ್ಲ ಜೊತೆಗೆ ಅದು ನನ್ನ ಕೆಲಸವೂ ಅಲ್ಲ. ನನ್ನ ಕೆಲಸ ಉತ್ತಮವಾಗಿ ಆಡುವುದು, ಅದನ್ನಷ್ಟೇ ಮಾಡುತ್ತೇನೆ ಹೊರೆತು ಪ್ರತಿಸ್ಪರ್ಧಿಗಳ ಬಗ್ಗೆ ಚಿಂತಿಸುವುದಿಲ್ಲ ಎಂದಿದ್ದಾರೆ.