ಕರ್ನಾಟಕ

karnataka

ETV Bharat / sports

ಸ್ಟಿವ್​ ಸ್ಮಿತ್​ಗೆ ಆಸಿಸ್​ ನಾಯಕತ್ವ ನೀಡುವ ಆಲೋಚನೆಯಿಲ್ಲ! ಕ್ರಿಕೆಟ್ ಆಸ್ಟ್ರೇಲಿಯಾ

ಆ್ಶಶಸ್​ ಟೆಸ್ಟ್​ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟಿವ್​ ಸ್ಮಿತ್​ ಅವರನ್ನು ಕೇವಲ ಬ್ಯಾಟ್ಸ್​ಮನ್​ ಆಗಿ ಮಾತ್ರ ನೋಡುತ್ತಿದ್ದೇವೆ ಹೊರತು ಅವರನ್ನು ಮರಳಿ ನಾಯಕರನ್ನಾಗಿ ಮಾಡುವ ಆಲೋಚನೆ ನಮ್ಮ ತಲೆಯಲ್ಲಿಲ್ಲ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ತಿಳಿಸಿದೆ.

smith

By

Published : Aug 10, 2019, 8:10 AM IST

ಮೆಲ್ಬೋರ್ನ್​: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯ ವೇಳೆ ಬಾಲ್​ ಟ್ಯಾಂಪರಿಂಗ್​ ಪ್ರಕರಣಕ್ಕೆ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿ ಮತ್ತೆ ತಂಡ ಸೇರಿರುವ ಸ್ಮಿತ್​ಗೆ ಮರಳಿ ನಾಯಕತ್ವ ನೀಡುವ ಆಲೋಚನೆ ಇಲ್ಲ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ಚೇರ್ಮನ್​ ಸ್ಪಷ್ಟಪಡಿಸಿದ್ದಾರೆ.

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಆ್ಯಶಸ್​ನಲ್ಲಿ ಆಸ್ಟ್ರೇಲಿಯಾ ಮೊದಲ ಟೆಸ್ಟ್​ನಲ್ಲಿ ಗೆದ್ದು ಬೀಗಿದೆ. ಮಾಜಿ ನಾಯಕ ಸ್ಟಿವ್​ ಸ್ಮಿತ್​ ಎರಡೂ ಇನ್ನಿಂಗ್ಸ್​ನಲ್ಲೂ ಭರ್ಜರಿ ಪ್ರದರ್ಶನ ತೋರಿದ್ದರು. ಮೊದಲ ಇನ್ನಿಂಗ್ಸ್​​ನಲ್ಲಿ 144 ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ 142 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಆಸ್ಟ್ರೇಲಿಯಾ ನಾಯಕ ಟಿಮ್​ ಪೇನ್​..

ಸ್ಮಿತ್​ ಭವಿಷ್ಯ ಕುರಿತು ಮಾತನಾಡಿರುವ ಸಿಎ ಮಂಡಳಿ ಚೇರ್ಮನ್​ ಇಯರ್ಲ್​ ಎಡ್ಡಿಂಗ್ಸ್​," ಸ್ಮಿತ್​ಗೆ ನಾಯಕತ್ವ ಕೊಡಬೇಕೆಂಬ ಆಲೋಚನೆ ನಮ್ಮ ತಲೆಯಲ್ಲಿಲ್ಲ, ನಾವು ಈಗಾಗಲೇ ಉತ್ತಮ ನಾಯಕನನ್ನು ಪಡೆದುಕೊಂಡಿದ್ದೇವೆ. ಸ್ಟಿವ್​ ತಂಡಕ್ಕೆ ಮಾತ್ರ ಸೇರಿಕೊಂಡಿದ್ದು, ಕೇವಲ ಬ್ಯಾಟ್ಸ್​ಮನ್​ ಆಗಿ ಮುಂದುವರಿಯಲಿದ್ದಾರೆ. ಇದುವೆರಗೂ ನಾಯಕತ್ವ ಬದಲಿಸುವ ಬಗ್ಗೆ ಯಾವುದೇ ಸಭೆಯಲ್ಲಿ ಯಾರು ಮಾತನಾಡಿಲ್ಲ​" ಎಂದು ಎಡ್ಡಿಂಗ್ಸ್ ತಿಳಿಸಿದ್ದಾರೆ.

ಆ ಮೂವರು(ಸ್ಮಿತ್​,ವಾರ್ನರ್​,ಬ್ಯಾನ್​ಕ್ರಾಫ್ಟ್​) ಮರಳಿ ತಂಡಕ್ಕೆ ಸೇರಿಕೊಂಡಿರುವುದಕ್ಕೆ ನಮಗೆ ಖುಷಿಯಾಗಿದೆ. ಅವರು ತಂಡದಲ್ಲಿ ಉತ್ತಮ ಮಾರ್ಗದಲ್ಲಿ ಆಡುವತ್ತಾ ಗಮನ ನೀಡಬೇಕು. ಆ ಕಡೆಗೆ ಮಾತ್ರ ನಮ್ಮ ಗಮನವಿದೆ. ಪೇನ್​ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ. ನಮಗೆ ಅವರ ನಾಯಕತ್ವ ಖುಷಿ ತಂದಿದೆ ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details