ಕರ್ನಾಟಕ

karnataka

ETV Bharat / sports

ಟೆಸ್ಟ್ ಚಾಂಪಿಯನ್​ಶಿಪ್​ಗೆ ನೀರಸ ಪ್ರತಿಕ್ರಿಯೆ... ಗ್ಯಾಲರಿಯಲ್ಲಿದ್ದಿದ್ದು ಕೇವಲ 50 ಮಂದಿ!

ಹನುಮ ವಿಹಾರಿ ಶತಕ, ಜಸ್ಪೀತ್ ಬುಮ್ರಾ ಚೊಚ್ಚಲ ಟೆಸ್ಟ್ ಹ್ಯಾಟ್ರಿಕ್ ಹಾಗೂ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಐದು ವಿಕೆಟ್ ಪಡೆದ ವಿಶೇಷ ಕ್ಷಣಗಳಿಗೆ ಜಮೈಕಾದ ಸಬೀನಾ ಪಾರ್ಕ್ ಮೈದಾನ ಸಾಕ್ಷಿಯಾದರೂ ಸಹ ನೋಡುಗರ ಸಂಖ್ಯೆ ಐವತ್ತೂ ಇರಲಿಲ್ಲ ಎನ್ನುವುದು ಶೋಚನೀಯ!

ಟೆಸ್ಟ್ ಚಾಂಪಿಯನ್​ಶಿಪ್​

By

Published : Sep 2, 2019, 10:38 AM IST

ಕಿಂಗ್​ಸ್ಟನ್​​: ವಿಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಪ್ರಸ್ತುತ ಎರಡನೇ ಟೆಸ್ಟ್ ಸಹ ಗೆಲ್ಲುವ ಉತ್ಸಾಹದಲ್ಲಿದ್ದು, ಪರಿಣಾಮ ಪಂದ್ಯ ಏಕಮುಖವಾಗಿ ಸಾಗುತ್ತಿದೆ. ಆತಿಥೇಯರ ನೀರಸ ಪ್ರದರ್ಶನದಿಂದ ಕ್ರೀಡಾಂಗಣಕ್ಕೆ ಆಗಮಿಸುವ ಕ್ರಿಕೆಟ್ ಪ್ರೇಮಿಗಳ ಸಂಖ್ಯೆ ಭಾರಿ ಇಳಿಕೆಯಾಗಿದೆ.

ಯುವ ಆಟಗಾರ ಹನುಮ ವಿಹಾರಿ ಶತಕ, ಜಸ್ಪೀತ್ ಬುಮ್ರಾ ಚೊಚ್ಚಲ ಟೆಸ್ಟ್ ಹ್ಯಾಟ್ರಿಕ್ ಹಾಗೂ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಐದು ವಿಕೆಟ್ ಪಡೆದ ವಿಶೇಷ ಕ್ಷಣಗಳಿಗೆ ಜಮೈಕಾದ ಸಬೀನಾ ಪಾರ್ಕ್ ಮೈದಾನ ಸಾಕ್ಷಿಯಾದರೂ ಸಹ ನೋಡುಗರ ಸಂಖ್ಯೆ ಐವತ್ತೂ ಇರಲಿಲ್ಲ ಎನ್ನುವುದು ಶೋಚನೀಯ.

ಐದು ವಿಕೆಟ್ ಕಿತ್ತ ಜೇಸನ್ ಹೋಲ್ಡರ್

ಇಂಡಿಯಯನ್ ಪ್ರೀಮಿಯರ್ ಲೀಗ್ ಮುಖ್ಯಸ್ಥ ರಾಜೀವ್ ಶುಕ್ಲಾ, ಎರಡನೇ ಟೆಸ್ಟ್​ನಲ್ಲಿ ನೋಡುಗರ ಸಂಖ್ಯೆ ಇಳಿಕೆಯಾದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆರಬಿಯನ್ನರ ನಾಡಿನಲ್ಲಿ ಟೆಸ್ಟ್ ಕ್ರಿಕೆಟ್ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ರಾಜೀವ್ ಶುಕ್ಲಾ, ಈ ನಿಟ್ಟಿನಲ್ಲಿ ಐಸಿಸಿ ಕಾರ್ಯೋನ್ಮುಖವಾಗಬೇಕು ಎಂದು ಮನವಿ ಮಾಡಿದ್ದಾರೆ.

ಶತಕ ಸಿಡಿಸಿದ ಹನುಮ ವಿಹಾರಿ

ವಿವಿಧ ದೇಶಗಳ ಟಿ-20 ಲೀಗ್​ಗಳು ಭಾರಿ ಜನಪ್ರಿಯತೆ ಪಡೆಯುತ್ತಿರುವ ವೇಳೆಯಲ್ಲೇ ಟೆಸ್ಟ್ ಕ್ರಿಕೆಟ್ ಜನಪ್ರಿಯತೆ ಕುಸಿತದ ಹಾದಿ ಹಿಡಿದಿತ್ತು. ಈ ಬೆಳವಣಿಗೆಯನ್ನು ಗಮನಿಸಿ ಹಾಗೂ ಟೆಸ್ಟ್ ಕ್ರಿಕೆಟ್ ಉತ್ತೇಜನಕ್ಕಾಗಿ ಐಸಿಸಿ ಈ ವರ್ಷದ ಆಗಸ್ಟ್​ನಲ್ಲಿ ಟೆಸ್ಟ್ ಚಾಂಪಿಯನ್​ಶಿಪ್​ಗೆ ಚಾಲನೆ ನೀಡಿತ್ತು. ಪ್ರಸ್ತುತ ಭಾರತ-ವಿಂಡೀಸ್ ನಡುವಿನ ಟೆಸ್ಟ್ ಸರಣಿ ಸಹ ಇದೇ ಚಾಂಪಿಯನ್​ಶಿಪ್​ಗೆ ಒಳಪಟ್ಟಿದೆ.

ABOUT THE AUTHOR

...view details