ಶಾರ್ಜಾ:ಐಪಿಎಲ್ನಲ್ಲಿ ಅತಿ ಹೆಚ್ಚು ಬೌಂಡರಿ- ಸಿಕ್ಸರ್ಗಳ ಸುರಿಮಳೆ ಕಂಡು ಬಂದಿರುವು ಚಿಕ್ಕ ಮೈದಾನ ಹೊಂದಿರುವ ಶಾರ್ಜಾ ಕ್ರೀಡಾಂಗಣದಲ್ಲಿ 4 ಓವರ್ಗಳಲ್ಲಿ ಕೇವಲ 12 ರನ್ ನೀಡಿ 1 ವಿಕೆಟ್ ಪಡೆದಿರುವ ಯಜವೇಂದ್ರ ಚಹಾಲ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತೆಂದು ಇಂಗ್ಲೆಂಡ್ ಹಾಗೂ ರಾಜಸ್ಥಾನ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ 194 ರನ್ಗಳಿಸಿತ್ತು. ಆರ್ಸಿಬಿಯ ಎಬಿ ಡಿ ವಿಲಿಯರ್ಸ್ 33 ಎಸೆತಗಳಲ್ಲಿ 73 ರನ್ ಸಿಡಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.
ಆದರೆ ಸ್ಟೋಕ್ಸ್, ಬ್ಯಾಟಿಂಗ್ಗಾಗಿ ನಿರ್ಮಿಸಿದಂತಿರುವ ಶಾರ್ಜಾ ಕ್ರೀಡಾಂಗಣದಲ್ಲಿ ಕೇವಲ 12 ರನ್ಗಳನ್ನು ಮಾತ್ರ ನೀಡಿ 1 ವಿಕೆಟ್ ಪಡೆದ ಯಜುವೇಂದ್ರ ಚಹಾಲ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿಬೇಕಾಗಿತ್ತು. ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಅವರು ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.