ಪುಣೆ :ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಇದೇ ರೀತಿ ಬ್ಯಾಟಿಂಗ್ ಮಾಡಿದರೆ ತಾವು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧವೆಂದು ಸೋಮವಾರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ, ಟಿ20 ವಿಶ್ವಕಪ್ ಹತ್ತಿರ ಬರುತ್ತಿದ್ದಂತೆ ಭಾರತ ತಂಡದ ಸಂಪೂರ್ಣ ಸಂಯೋಜನೆಯ ಚಿತ್ರಣ ಹೊರಬರಲಿದೆ. ಈಗಿನ ಪ್ರಯೋಗಗಳನ್ನು ತಾತ್ಕಾಲಿಕವಷ್ಟೇ ಎಂದಿದ್ದಾರೆ.
"ಮೊದಲಿಗೆ ಭಾರತ ತಂಡದ ಆಯ್ಕೆಯಲ್ಲಿ ಟೀಂ ಮ್ಯಾನೇಜ್ಮೆಂಟ್ ಪಾತ್ರವಿರುವುದಿಲ್ಲವೋ ಹಾಗೆಯೇ, ಮೈದಾನದಲ್ಲಿ ಆಡುವ ಸಂಯೋಜನೆಯಲ್ಲಿ ಆಯ್ಕೆಗಾರರು ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ(ಕ್ರಮಾಂಕ ಬದಲಾವಣೆಯ ಬಗ್ಗೆ), ಎರಡನೆಯದಾಗಿ ರೋಹಿತ್ ಹೇಳಿದಂತೆ ಇದು ತಂಡದ ಕಾರ್ಯತಂತ್ರದ ನಡೆಯಾಗಿದೆ.
ನಾವಿಬ್ಬರು ಆರಂಭಿಕರಾಗಿ ಕೊನೆಯ ಟಿ20 ಪಂದ್ಯದಲ್ಲಿ ಒಟ್ಟಿಗೆ ಬ್ಯಾಟಿಂಗ್ ಮಾಡುವ ಮೂಲಕ ಆನಂದಿಸಿದ್ದೇವೆ. ಆದರೆ, ಭವಿಷ್ಯದಲ್ಲಿ ಇದನ್ನು ಮುಂದುವರಿಸಲಾಗುವುದು ಎಂಬುದರ ಬಗ್ಗೆ ಖಾತ್ರಿಯಿಲ್ಲ" ಎಂದು ಕೊಹ್ಲಿ ತಿಳಿಸಿದ್ದಾರೆ.