ಕರ್ನಾಟಕ

karnataka

ETV Bharat / sports

ಸದ್ಯಕ್ಕೆ ನಿವೃತ್ತಿ ಯೋಚನೆ ಇಲ್ಲ.. ಇನ್ನೂ 2 ವಿಶ್ವಕಪ್ ಆಡಬೇಕು ಎಂದ ಕ್ರಿಸ್ ಗೇಲ್ - ನಿವೃತ್ತಿ ಇಲ್ಲ ಎಂದ ಕ್ರಿಸ್ ಗೇಲ್

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದಿರುವ ಗೇಲ್, 2021ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಮಾತ್ರವಲ್ಲ, ಆಸ್ಟ್ರೇಲಿಯಾದಲ್ಲಿ ಆಯೋಜಿಸಲಿರುವ 2022 ಆವೃತ್ತಿಯತ್ತಲೂ ಗಮನ ಹರಿಸಿದ್ದಾರೆ..

Chris Gayle
ಸದ್ಯಕ್ಕೆ ನಿವೃತ್ತಿ ಯೋಚನೆ ಇಲ್ಲ ಎಂದ ಕ್ರಿಸ್ ಗೇಲ್

By

Published : Jan 1, 2021, 1:37 PM IST

ನವದೆಹಲಿ :ನಿವೃತ್ತಿ ಉಹಾಪೋಹಗಳಿಗೆ ತೆರೆ ಎಳೆದಿರುವ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಇನ್ನೂ 2 ವಿಶ್ವಕಪ್ ಟೂರ್ನಿಗಳನ್ನು ಆಡಬೇಕಿದೆ ಎಂದಿದ್ದಾರೆ.

ಅಲ್ಟಿಮೇಟ್ ಕ್ರಿಕೆಟ್ ಚಾಲೆಂಜ್ ಟೂರ್ನಿ ವೇಳೆ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಗೇಲ್, ನಾನು ಇನ್ನೂ 5 ವರ್ಷಗಳವರೆಗೆ ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದೇನೆ ಎಂದಿದ್ದಾರೆ.

ಖಂಡಿತ ಈಗ ನಿವೃತ್ತಿ ಯೋಚನೆ ಇಲ್ಲ. ನನಗೆ ಇನ್ನೂ ಐದು ವರ್ಷಗಳಿವೆ ಎಂದು ನಾನು ನಂಬುತ್ತೇನೆ. ಆದ್ದರಿಂದ 45 ವರ್ಷ ವಯಸ್ಸಿಗಿಂತಾ ಮೊದಲು ನಿವೃತ್ತಿಗೆ ಯಾವುದೇ ಅವಕಾಶವಿಲ್ಲ ಎಂದಿರುವ 41 ವರ್ಷ ವಯಸ್ಸಿನ ಗೇಲ್, ಇನ್ನೂ ಎರಡು ವಿಶ್ವಕಪ್‌ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಓದಿನಾವು ಕೆಲವು ಬಾರಿ ಭಾರತೀಯರ ಬಲೆಗೆ ಬಿದ್ದಿದ್ದೇವೆ: ಅಶ್ವಿನ್ ಬಗ್ಗೆ ಲಾಬುಶೇನ್ ಪ್ರತಿಕ್ರಿಯೆ

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದಿರುವ ಗೇಲ್, 2021ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಮಾತ್ರವಲ್ಲ, ಆಸ್ಟ್ರೇಲಿಯಾದಲ್ಲಿ ಆಯೋಜಿಸಲಿರುವ 2022 ಆವೃತ್ತಿಯತ್ತಲೂ ಗಮನ ಹರಿಸಿದ್ದಾರೆ.

ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ್ದ ಗೇಲ್ 7 ಇನ್ನಿಂಗ್ಸ್​ಗಳಿಂದ 41.14 ಸರಾಸರಿಯಲ್ಲಿ 288 ರನ್​ ಗಳಿಸಿದ್ದರು. 137.14 ಸ್ಟ್ರೈಕ್ ರೇಟ್ ಹೊಂದಿದ್ದ ಗೇಲ್, 99 ರನ್​ ಸೇರಿದಂತೆ ಮೂರು ಬಾರಿ ಅರ್ಧಶತಕ ಸಿಡಿಸಿದ್ದರು.

ABOUT THE AUTHOR

...view details