ಲಂಡನ್: ಟೂರ್ನಿಯ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಕಿವೀಸ್ ಆರಂಭಿಕ ಬ್ಯಾಟ್ಸ್ಮನ್ ಮಾರ್ಟಿನ್ ಗಪ್ಟಿಲ್ ನಂತರದ ಪಂದ್ಯಗಳಲ್ಲಿ ಹೆಚ್ಚು ಒಂದಂಕಿ ಮೊತ್ತಕ್ಕೆ ಸೀಮಿತರಾಗಿದ್ದರು. ಆದರೆ ಅವರೇ ತಮ್ಮ ತಂಡ ಫೈನಲ್ ತಲುಪಲು ನೆರವಾಗಿ ಕಿವೀಸ್ ಪಾಲಿಗೆ ಹೀರೋ ಆಗಿದ್ದಾರೆ.
ಹೌದು. ಗಪ್ಟಿಲ್ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 73 ರನ್ಗಳಿಸಿದ್ದರು. ಅದನ್ನು ಹೊರತು ಪಡಿಸಿ ಉಳಿದ 8 ಇನ್ನಿಂಗ್ಸ್ಗಳಲ್ಲಿ ಒಂದು ಪಂದ್ಯದಲ್ಲಿ 35 ರನ್ಗಳಿಸಿದ್ದು ಬಿಟ್ಟರೆ ಒಂದಂಕಿ ಮೊತ್ತಕ್ಕೆ ಹೆಚ್ಚುಬಾರಿ ಔಟಾಗಿದ್ದರು. ಆದರೆ, ಹೇಗೋ ರನ್ ರೇಟ್ ಆಧಾರದ ಮೇಲೆ ಸೆಮಿಫೈನಲ್ ತಲುಪಿದ್ದ ಕಿವೀಸ್ ಫೈನಲ್ಗೇರಲು ಗಪ್ಟಿಲ್ ಮಾಡಿದ ಒಂದು ರನ್ಔಟ್ನಿಂದ ಎಂದರೆ ಅದು ಅತಿಶಯೋಕ್ತಿಯಲ್ಲ.
ಧೋನಿಯನ್ನು ರನ್ ಮಾಡಿದ ಖುಷಿಯಲ್ಲಿ ಗಪ್ಟಿಲ್ 2015 ರ ವಿಶ್ವಕಪ್ನಲ್ಲಿ ಟೂರ್ನಿಯ ಗರಿಷ್ಠ ಸ್ಕೋರರ್ ಆಗಿದ್ದ ಗಪ್ಟಿಲ್, ಈ ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ತೋರಿ ಟೀಕೆಗೆ ಗುರಿಯಾಗಿದ್ದರು. ಆದರೆ ಸೆಮಿಫೈನಲ್ನಲ್ಲಿ ಎಂಎಸ್ ಧೋನಿಯನ್ನು ತಮ್ಮ ಚಾಣಾಕ್ಷ ಫೀಲ್ಡಿಂಗ್ ಮೂಲಕ ಡೈರೆಕ್ಟ್ ಹಿಟ್ ಮಾಡಿ ತಂಡವನ್ನು ಸೆಮಿಫೈನಲ್ಗೇರುವಂತೆ ಮಾಡಿ ತಮ್ಮ ವಿರುದ್ಧದ ಟೀಕೆಯನ್ನು ಕೊಂಚ ತಗ್ಗಿಸಿಕೊಂಡಿದ್ದಾರೆ.
ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಗಪ್ಟಿಲ್, ನನ್ನ ಪ್ರದರ್ಶನದಿಂದ ಬೇರೆಯವರಿಗಿಂತ ಹೆಚ್ಚು ನಿರಾಶೆ ನನಗೆ ಆಗಿದೆ. ಆದರೆ ನನ್ನ ಅದೃಷ್ಟ ಧೋನಿಯನ್ನು ರನ್ಔಟ್ ಮಾಡುವ ಮೂಲಕ ತಂಡಕ್ಕೆ ಗೆಲುವು ತಂಡುಕೊಟ್ಟಿರುವುದು ಖುಷಿ ನೀಡಿದೆ. ಆದರೆ ಫೈನಲ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತೇನೆ ಎಂದು ತಿಳಿಸಿದ್ದಾರೆ.
ಗಪ್ಟಿಲ್ 2015 ವಿಶ್ವಕಪ್ನಲ್ಲಿ 2 ಶತಕ ಹಾಗೂ 1 ಅರ್ಧಶತಕ ಸಹಿತ 547 ರನ್ಗಳಿಸಿದ್ದ ಗಪ್ಟಿಲ್ 2019 ರ ವಿಶ್ವಕಪ್ನಲ್ಲಿ 9 ಪಂದ್ಯಗಳಿಂದ ಕೇವಲ ಒಂದು ಅರ್ಧಶತಕದ ನೆರವಿನಿಂದ 167 ರನ್ಗಳಿಸಿದ್ದಾರೆ.