ತಿರುವನಂತಪುರ: ಮೊದಲ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರ್ಭಟಕ್ಕೆ ತುತ್ತಾಗಿದ್ದ ವಿಲಿಯಮ್ಸ್ 2ನೇ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪಡೆದು ತಿರುಗೇಟು ನೀಡಿದರೂ, ಸೆಲೆಬ್ರೇಷನ್ನಲ್ಲಿ ಮಾತ್ರ ಬದಲಾವಣೆ ಮಾಡಿಕೊಂಡಿದ್ದಾರೆ.
2017ರಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ವೇಳೆ, ಕೊಹ್ಲಿ ವಿಕೆಟ್ ಪಡೆದು ನೋಟ್ಬುಕ್ ಸೆಲೆಬ್ರೇಷನ್ ಮಾಡಿ ಕೊಹ್ಲಿ ಕೆಣಕಿದ್ದರು. ಇನ್ನು ಈ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ವಿಲಿಯಮ್ಸ್ಗೆ ಬೌಂಡರಿಗಳ ಸುರಿಮಳೆ ಸುರಿಸಿ ನೋಟ್ಬುಕ್ ಸೆಲೆಬ್ರೇಷನ್ ಮಾಡಿ ಇಂಟರ್ನೆಟ್ನಲ್ಲಿ ಕಿಚ್ಚು ಹಚ್ಚಿದ್ದರು.
ಕೊಹ್ಲಿ ಕೆಣಕಿ ತಿರುಗೇಟು ತಿಂದ ವಿಲಿಯಮ್ಸ್ 2ನೇ ಪಂದ್ಯದಲ್ಲಿ ವಿಕೆಟ್ ಪಡೆಯುವ ಮೂಲಕ 'ಶ್' ಎಂದು ಬಾಯಿ ಮೇಲೆ ಬರೆಳಿಟ್ಟು ಸೆಲೆಬ್ರೇಷನ್ ಮಾಡುವ ಮೂಲಕ ಅಭಿಮಾನಿಗಳ ಅಚ್ಚರಿಗೆ ಕಾರಣರಾಗಿದ್ದಾರೆ.
ವಿಲಿಯಮ್ಸ್ ಸೆಲೆಬ್ರೇಷನ್ ನೋಡಿದ ಭಾರತೀಯ ಅಭಿಮಾನಿಗಳು ಕೆಲವರು ಕೊಹ್ಲಿ ಕೆಣಕುವುದು ಬೇಡ ಎಂದು ಈ ರೀತಿ ಸೆಲೆಬ್ರೇಷನ್ ಮಾಡುತ್ತಿದ್ದಾರೆ ಎಂದರೆ ಮತ್ತೆ ಕೆಲವರು ಮೊದಲ ಪಂದ್ಯದಲ್ಲಿ ಕೊಹ್ಲಿಯಿಂದ ದಂಡಿಸಿಕೊಂಡರೂ ಬುದ್ದಿ ಬಂದಿಲ್ಲ ಮುಂದಿನ ಪಂದ್ಯದಲ್ಲಿ ಕೊಹ್ಲಿ ನಿಮ್ಮನ್ನು ನೋಡಿಕೊಳ್ಳಲಿದ್ದಾರೆ ಎಂದು ಎರಡು ರೀತಿಯಲ್ಲೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಎರಡನೇ ಪಂದ್ಯದಲ್ಲಿ 19 ರನ್ಗಳಿಸಿ ವಿಲಿಯಮ್ಸ್ ಬೌಲಿಂಗ್ನಲ್ಲಿ ಸಿಮನ್ಸ್ಗೆ ಕ್ಯಾಚ್ ನೀಡಿದ್ದರು. ಕೊಹ್ಲಿ ವಿಕೆಟ್ ಪಡೆದ ವಿಲಿಯಮ್ಸ್ ವೀಕ್ಷಕರತ್ತ ತಿರುಗು ಬಾಯಿ ಮೇಲೆ ಬೆರಳಿಟ್ಟು ಸೈಲೆಂಟ್ ಎಂದು ಸೂಚಿಸಿ ಸಂಭ್ರಮಿಸಿದ್ದರು. ಅಲ್ಲದೇ ತಮ್ಮ ತಂಡದ ಆಟಗಾರನನ್ನು ಹೆಚ್ಚು ಸೆಲೆಬ್ರೇಷನ್ ಮಾಡದಂತೆ ಕೇಳಿಕೊಂಡಿದ್ದರು. ಇದರಿಂದ ವಿಲಿಯಮ್ಸ್ ಕೊಹ್ಲಿಯನ್ನು ಕೆಣಕಿದ್ದಾರೋ, ಅಥವಾ ಕೊಹ್ಲಿ ಬಯಪಟ್ಟು ತಮ್ಮ ಸಿಗ್ನೇಚರ್ ಸೆಲೆಬ್ರೇಷನ್ ಮಾಡುವುದನ್ನು ಬಿಟ್ಟಿದ್ದಾರೆ ಎಂಬುದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ.