ಕರ್ನಾಟಕ

karnataka

ETV Bharat / sports

ಈ ಪ್ಲೇಯರ್​​ಗೆ ಐಪಿಎಲ್​ನಲ್ಲಿ ಆಡಲು ಅನುಮತಿ ನೀಡದ ಬಾಂಗ್ಲಾ ಕ್ರಿಕೆಟ್​ ಮಂಡಳಿ - IPL 2020

ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಬಾಂಗ್ಲಾ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳುವುದರಿಂದ ರಹಮಾನ್​ಗೆ ಎನ್ಒಸಿ ಕೊಡದಿರಲು ಕಾರಣ ಎಂದು ಬಿಸಿಬಿಯ ಕ್ರಿಕೆಟ್ ಕಾರ್ಯಾಚರಣೆಯ ಅಧ್ಯಕ್ಷ ಅಕ್ರಮ್ ಖಾನ್ ಹೇಳಿದ್ದಾರೆ.

ಮುಸ್ತಫಿಜುರ್​ ರಹಮಾನ್​
ಮುಸ್ತಫಿಜುರ್​ ರಹಮಾನ್​

By

Published : Sep 5, 2020, 4:26 PM IST

ಡಾಕಾ: ಬಾಂಗ್ಲಾದೇಶದ ಪ್ರತಿಭಾನ್ವಿತ ಬೌಲರ್​ ಮುಸ್ತಫಿಜುರ್​ ರಹಮಾನ್​ಗೆ ಐಪಿಎಲ್​ನಲ್ಲಿ ಅವಕಾಶ ಒದಗಿ ಬಂದರೂ, ಅಲ್ಲಿನ ಕ್ರಿಕೆಟ್​​ ಮಂಡಳಿ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ನಲ್ಲಿ ಆಡಲು ನಿರಪೇಕ್ಷಣಾ ಪತ್ರವನ್ನು ನೀಡಲು ಹಿಂದೇಟು ಹಾಕಿದೆ.

13ನೇ ಆವೃತ್ತಿಯ ಐಪಿಎಲ್​ನಿಂದ ಗಾಯದ ಕಾರಣ ಹ್ಯಾರಿ ಗಾರ್ನಿ ಹಿಂದೆ ಸರಿದಿದ್ದು, ಅವರ ಜಾಗಕ್ಕೆ ಕೊಲ್ಕತ್ತಾ ತಂಡ ಮುಸ್ತುಫಿಜುರ್​​​ಗೆ ಆಡಿಸಲು ಬಯಸಿತ್ತು. ಇದಕ್ಕಾಗಿ ಅವರಿಗೆ ಕರೆ ನೀಡಿದೆ. ಆದರೆ ಬಾಂಗ್ಲಾದೇಶ ಕ್ರಿಕೆಟ್​ ಬೋರ್ಡ್​ ನಿರಪೇಕ್ಷಣ ಪತ್ರ(ಎನ್​ಒಸಿ) ಕೊಡಲು ನಿರಾಕರಿಸಿದೆ.

ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಬಾಂಗ್ಲಾ ಕ್ರಿಕೆಟ್​​ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳುವುದರಿಂದ ರಹಮಾನ್​ಗೆ ಎನ್ಒಸಿ ನೀಡಲು ಕಾರಣ ಎಂದು ಬಿಸಿಬಿಯ ಕ್ರಿಕೆಟ್ ಕಾರ್ಯಾಚರಣೆಯ ಅಧ್ಯಕ್ಷ ಅಕ್ರಮ್ ಖಾನ್ ಹೇಳಿದ್ದಾರೆ.

"ಮುಸ್ತಫಿಜುರ್​​ಗಾಗಿ ಐಪಿಎಲ್​ನಿಂದ ಪ್ರಸ್ತಾಪ ಬಂದಿದೆ. ಆದರೆ ನಾವು ಆ ಸಮಯದಲ್ಲಿ ಪ್ರವಾಸವನ್ನು ಹೊಂದಿರುವುದರಿಂದ ಅವರಿಗೆ ಎನ್ಒಸಿ ನೀಡಿಲ್ಲ. ಈ ಪ್ಲೇಯರ್​​ ನಮ್ಮ ತಂಡದ ಪ್ರಮುಖ ಕ್ರಿಕೆಟಿಗರಾಗಿದ್ದಾರೆ ಮತ್ತು ಮುಂಬರುವ ಸರಣಿ ನಮಗೆ ಮುಖ್ಯವಾಗಿದೆ" ಎಂದು ಖಾನ್ ಹೇಳಿದರು.

ಮುಸ್ತಫಿಜುರ್​​ ಕೊನೆಯ ಬಾರಿ 2018ರಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡಿದ್ದರು. 2016 ಮತ್ತು 2017ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಪರ ಆಡಿದ್ದರು. ಅವರು ಒಟ್ಟಾರೆ 24 ಪಂದ್ಯಗಳನ್ನಾಡಿದ್ದು, 24 ವಿಕೆಟ್​ ಪಡೆದಿದ್ದಾರೆ.

ABOUT THE AUTHOR

...view details