ಕರ್ನಾಟಕ

karnataka

By

Published : Nov 17, 2020, 8:19 PM IST

ETV Bharat / sports

ಆತ ಭಾರತ ತಂಡದ ಭವಿಷ್ಯದ ನಾಯಕನಾಗುವುದರಲ್ಲಿ ನನಗೆ ಯಾವುದೇ ಅನುಮಾನಗಳಿಲ್ಲ: ಅಲೆಕ್ಸ್ ಕ್ಯಾರಿ

ಕಳೆದ 11 ಆವೃತ್ತಿಗಳಲ್ಲೂ ಘಟಾನುಘಟಿ ನಾಯಕರು, ಆಟಗಾರರಿದ್ದರೂ ಡೆಲ್ಲಿ ತಂಡ ಒಮ್ಮೆಯೂ ಫೈನಲ್​ ಪ್ರವೇಶಿಸಿರಲಿಲ್ಲ. ಆದರೆ 2018ರ ಮಧ್ಯಂತರದಲ್ಲಿ ಗಂಭೀರ್ ನಾಯಕತ್ವ ತ್ಯಜಿಸಿದ ನಂತರ ಐಯ್ಯರ್​ ಡೆಲ್ಲಿ ಚುಕ್ಕಾಣಿ ಹಿಡಿದಿದ್ದರು. ಐಯ್ಯರ್​ 2019ರಲ್ಲಿ ಪ್ಲೇ ಆಫ್ ಮತ್ತು 2020ರಲ್ಲಿ ಫೈನಲ್​ಗೆ ಕೊಂಡೊಯ್ದಿದ್ದಾರೆ. ತಂಡ ಚಾಂಪಿಯನ್ ಆಗದಿದ್ದರೂ ಸರಣಿಯುದ್ದಕ್ಕೂ ಐಯ್ಯರ್​ ನಾಯಕತ್ವ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಅಲೆಕ್ಸ್​ ಕ್ಯಾರಿ
ಅಲೆಕ್ಸ್​ ಕ್ಯಾರಿ

ಸಿಡ್ನಿ: ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು 13ನೇ ಐಪಿಎಲ್​ನಲ್ಲಿ ಫೈನಲ್​ಗೆ ಮುನ್ನಡೆಸಿದ್ದ ಯುವ ಬ್ಯಾಟ್ಸ್​ಮನ್​ ಶ್ರೇಯಸ್​ ಐಯ್ಯರ್ ಭವಿಷ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲು ಅರ್ಹ ಆಟಗಾರ ಎಂದು ಆಸ್ಟ್ರೇಲಿಯಾದ ವಿಕೆಟ್​ ಕೀಪರ್​ ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.

ಕಳೆದ 11 ಆವೃತ್ತಿಗಳಲ್ಲೂ ಘಟಾನುಘಟಿ ನಾಯಕರು, ಆಟಗಾರರಿದ್ದರೂ ಡೆಲ್ಲಿ ತಂಡ ಒಮ್ಮೆಯೂ ಫೈನಲ್​ ಪ್ರವೇಶಿಸಿರಲಿಲ್ಲ. ಆದರೆ 2018ರ ಮಧ್ಯಂತರದಲ್ಲಿ ಗಂಭೀರ್ ನಾಯಕತ್ವ ತ್ಯಜಿಸಿದ ನಂತರ ಐಯ್ಯರ್​ ಡೆಲ್ಲಿ ಚುಕ್ಕಾಣಿ ಹಿಡಿದಿದ್ದರು. ಐಯ್ಯರ್​ 2019ರಲ್ಲಿ ಪ್ಲೇ ಆಫ್ ಮತ್ತು 2020ರಲ್ಲಿ ಫೈನಲ್​ಗೆ ಕೊಂಡೊಯ್ದಿದ್ದಾರೆ. ತಂಡ ಚಾಂಪಿಯನ್ ಆಗದಿದ್ದರೂ ಸರಣಿಯುದ್ದಕ್ಕೂ ಐಯ್ಯರ್​ ನಾಯಕತ್ವ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ಸರಣಿಗೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಆಡಿದ್ದ ಕ್ಯಾರಿ, ಶ್ರೇಯಸ್​ ಐಯ್ಯರ್​ ಭಾರತ ತಂಡದ ಭವಿಷ್ಯದ ನಾಯಕ ಎನ್ನುವುದರಲ್ಲಿ ನನ್ನ ಮನಸಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.

ಶ್ರೇಯಸ್ ಐಯ್ಯರ್​

"ಮುಂದೊಂದು ದಿನ ಭಾರತವನ್ನು ಮುನ್ನಡೆಸುವ ಸಾಮರ್ಥ್ಯ ಅವನಿಗಿದೆ ಎಂಬುದರಲ್ಲಿ ಸಂಶಯವಿಲ್ಲ. ಶ್ರೇಯಸ್ ಅವರು ಅದ್ಭುತ ನಾಯಕರಾಗಿ ಹೊರ ಹೊಮ್ಮಲಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

ತಂಡದ ಎಲ್ಲಾ ಆಟಗಾರರ ಜೊತೆಗೆ ಉತ್ತಮ ಸಂವಹನ ನಡೆಸುವ ಕಲೆ ಶ್ರೇಯಸ್ ಐಯ್ಯರ್ ಅವರಲ್ಲಿದೆ. ತನ್ನ ಪ್ರದರ್ಶನದ ಜೊತೆಗೆ ತಂಡವನ್ನು ಕೂಡ ಅತ್ಯುತ್ತಮವಾಗಿ ಮುನ್ನಡೆಸುವ ಚಾಣಾಕ್ಷತೆ, ಒತ್ತಡವನ್ನು ನಿರ್ವಹಿಸುವ ಸಾಮರ್ಥ್ಯ ಅವರಲ್ಲಿದೆ. ಆದ್ದರಿಂದಲೇ ಡೆಲ್ಲಿ ತಂಡಕ್ಕೆ ಅವರು ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ಯಶಸ್ಸನ್ನು ತಂದುಕೊಟ್ಟಿದ್ದಾರೆ. ಖಂಡಿತಾ ಅವರು ಭವಿಷ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಎಲ್ಲಾ ಅರ್ಹತೆ ಹೊಂದಿದ್ದಾರೆ" ಎಂದು ಅಲೆಕ್ಸ್ ಕ್ಯಾರಿ ಹೇಳಿದ್ದಾರೆ.

23 ವರ್ಷದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ 17 ಪಂದ್ಯಗಳಲ್ಲಿ 411 ರನ್​ ಗಳಿಸಿದ್ದರು. 40 ಎಸೆತಗಳಲ್ಲಿ ಔಟಾಗದೆ 93 ರನ್ ​ಗಳಿಸಿದ್ದು ಅವರ ಗರಿಷ್ಠ ರನ್ ​ಗಳಿಕೆಯಾಗಿದೆ.

ABOUT THE AUTHOR

...view details