ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ ಸಭೆಗೆ ಯಾವುದೇ ದಿನಾಂಕ ಅಂತಿಮಗೊಳಿಸಲಾಗಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೂಲಗಳು ತಿಳಿಸಿವೆ.
ಐಪಿಎಲ್ ಆಡಳಿತ ಮಂಡಳಿ ಸಭೆಗೆ ನಿಗದಿಯಾಗದ ದಿನಾಂಕ: ಆರ್ಥಿಕ ವರದಿಗೆ ಕಾಯುತ್ತಿದೆ ಬಿಸಿಸಿಐ - ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕರು
ಐಪಿಎಲ್ ಆಡಳಿತ ಮಂಡಳಿ ಸಭೆಗೆ ಯಾವುದೇ ದಿನಾಂಕ ನಿಗದಿಯಾಗಿಲ್ಲ. ಐಪಿಎಲ್‌ನ ಒಟ್ಟಾರೆ ಹಣಕಾಸಿನ ಅಂಶಗಳ ಬಗ್ಗೆ ಆಂತರಿಕ ಮಾರ್ಕೆಟಿಂಗ್ ತಂಡದ ವರದಿಗಾಗಿ ಬಿಸಿಸಿಐ ಕಾಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪೂರ್ವ ಲಡಾಖ್‌ನಲ್ಲಿ ಚೀನಾ ಸೈನಿಕರೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಹೀಗಾಗಿ ಐಪಿಎಲ್ ಆಡಳಿತ ಮಂಡಳಿ ಈ ವಾರ ವಿವಿಧ ಪ್ರಾಯೋಜಕತ್ವದ ಒಪ್ಪಂದಗಳನ್ನು ಪರಿಶೀಲಿಸುವ ಸಭೆ ನಡೆಸಲಿದೆ. ಸದ್ಯ ಚೀನಾದ ಮೊಬೈಲ್ ಕಂಪನಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾಯೋಜಕತ್ವ ಹೊಂದಿದೆ. ಆಡಳಿತ ಮಂಡಳಿ ಸಭೆಗೆ ಯಾವುದೇ ದಿನಾಂಕ ನಿರ್ಧರಿಸಲಾಗಿಲ್ಲ. ಐಪಿಸಿಎಲ್ನ ಒಟ್ಟಾರೆ ಹಣಕಾಸಿನ ಅಂಶಗಳ ಬಗ್ಗೆ ಆಂತರಿಕ ಮಾರ್ಕೆಟಿಂಗ್ ತಂಡದ ವರದಿಗಾಗಿ ಬಿಸಿಸಿಐ ಕಾಯುತ್ತಿದೆ ಎಂದು ಮೂಲಗಳು ಪ್ರಮುಖ ಸುದ್ದಿ ಸಂಸ್ಥೆಗೆ ತಿಳಿಸಿವೆ.
ಪ್ರಸ್ತುತ ಚೀನಾದ ಮೊಬೈಲ್ ತಯಾರಕರು ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕರಾಗಿದ್ದಾರೆ. 2022ರಲ್ಲಿ ಕೊನೆಗೊಳ್ಳುವ ಐದು ವರ್ಷಗಳ ಒಪ್ಪಂದದಿಂದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ವಾರ್ಷಿಕವಾಗಿ 440 ಕೋಟಿ ರೂ. ಆದಾಯ ಬರುತ್ತಿದೆ. ಸೈನಿಕರ ಘರ್ಷಣೆ ಬೆನ್ನಲ್ಲೇ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಕೂಗು ಕೇಳಿ ಬರುತ್ತಿದೆ. ಹೀಗಾಗಿ ಮುಂದಿನ ವಾರ ನಡೆಯುವ ಸಭೆಯಲ್ಲಿ ಚೀನಾದ ಮೊಬೈಲ್ ಉತ್ಪಾದನಾ ಕಂಪನಿ ಜೊತೆಗಿನ ಐಪಿಎಲ್ ಪ್ರಾಯೋಜಕತ್ವದ ಒಪ್ಪಂದ ಪರಿಶೀಲಿಸುವುದಾಗಿ ಬಿಸಿಸಿಐ ತಿಳಿಸಿತ್ತು.