ಕರ್ನಾಟಕ

karnataka

ETV Bharat / sports

ಐಪಿಎಲ್​ಗೂ ಮುನ್ನ ಟೂರ್ನಿಗಳಿಲ್ಲದೇ ಇರುವುದು ಸ್ಟೈನ್​ ಬೌಲಿಂಗ್​ ಮೇಲೆ ಪರಿಣಾಮ ಬೀರಿದೆ: ವಿಲಿಯರ್ಸ್​ - ಆರ್​ಸಿಬಿ

ಐಪಿಎಲ್​ಗೂ ಮುನ್ನ ಸಾಕಷ್ಟು ಕ್ರಿಕೆಟ್ ಆಡಿರದೇ ಇರುವುದು ಡೇಲ್​ ಸ್ಟೈನ್ ಅವರ ಬೌಲಿಂಗ್ ವೇರಿಯೇಸನ್​ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಹರಿಣಗಳ ಪರ 1990 ರಿಂದ 1998ರವರೆಗೆ 18 ಟೆಸ್ಟ್​ ಹಾಗೂ 83 ಏಕದಿನ ಪಂದ್ಯಗಳನ್ನಾಡಿರುವ ವಿಲಿಯರ್ಸ್​ ಅಭಿಪ್ರಾಯ ಪಟ್ಟಿದ್ದಾರೆ.

ಡೇಲ್ ಸ್ಟೈನ್
ಡೇಲ್ ಸ್ಟೈನ್

By

Published : Oct 29, 2020, 6:19 PM IST

ನವದೆಹಲಿ:ಆರ್​ಸಿಬಿ ತಂಡದ ಬೌಲರ್ ಡೇಲ್ ಸ್ಟೈನ್​ 13ನೇ ಆವೃತ್ತಿಯಲ್ಲಿ ಅತ್ಯಂತ ದುರ್ಬಲವಾಗಿದೆ. ಅವರು ಆಡಿರುವ 3 ಪಂದ್ಯಗಳಿಂದ 11.40 ಎಕಾನಮಿಯಲ್ಲಿ ಕೇವಲ ಒಂದು ವಿಕೆಟ್​ ಪಡೆದಿದ್ದಾರೆ. ಆದರೆ, ಅವರ ವೈಫಲ್ಯಕ್ಕೆ ಕಾರಣ ಏನೆಂಬುದನ್ನು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಫ್ಯಾನಿ ಡಿ ವಿಲಿಯರ್ಸ್​ ಬಹಿರಂಗಪಡಿಸಿದ್ದಾರೆ.

ಐಪಿಎಲ್​ಗೂ ಮುನ್ನ ಸಾಕಷ್ಟು ಕ್ರಿಕೆಟ್ ಆಡಿರದೇ ಇರುವುದು ಡೇಲ್​ ಸ್ಟೈನ್ ಅವರ ಬೌಲಿಂಗ್ ವೇರಿಯೇಸನ್​ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಹರಿಣಗಳ ಪರ 1990 ರಿಂದ 1998ರವರೆಗೆ 18 ಟೆಸ್ಟ್​ ಹಾಗೂ 83 ಏಕದಿನ ಪಂದ್ಯಗಳನ್ನಾಡಿರುವ ವಿಲಿಯರ್ಸ್​ ಅಭಿಪ್ರಾಯ ಪಟ್ಟಿದ್ದಾರೆ.

" ಕೋವಿಡ್ 19 ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕಠಿಣವಾದ ನಿಯಮಾವಳಿಗಳಿದ್ದರಿಂದ ಹೊರ ಹೋಗಿ ಅಭ್ಯಾಸ ಮಾಡಲು ಸಾಧ್ಯವಾಗಿಲ್ಲ. ಜೊತೆಗೆ ಸ್ಟೈನ್ ಯುವ ಆಟಗಾರನಲ್ಲ, ಆತ ಈಗಾಗಲೇ ಸಾಕಷ್ಟು ಗಾಯಗಳಿಂದ ನಲುಗಿದ್ದಾರೆ. ಹಾಗಾಗಿ ಅವರಿಗೆ ಐಪಿಎಲ್​ಗೂ ಮುನ್ನ ಕೆಲವು ಕ್ರಿಕೆಟ್​ ಪಂದ್ಯಗಳನ್ನಾಡುವ ಅವಶ್ಯಕತೆಯಿತ್ತು. ಆದರೆ, ಅದು ಸಾಧ್ಯವಾಗದ ಕಾರಣ ಅವರ ಬೌಲಿಂಗ್ ಮೊನಚು ಕಳೆದುಕೊಂಡಿದೆ, ಇದಕ್ಕೆಲ್ಲ ಕಾರಣ ಕೋವಿಡ್​ " ಫ್ಯಾನಿ ಡಿ ವಿಲಿಯರ್ಸ್​ ತಿಳಿಸಿದ್ದಾರೆ.

ಫ್ಯಾನಿ ಡಿ ವಿಲಿಯರ್ಸ್​

ವೇಗದ ಬೌಲರ್​ ಸಾಕಷ್ಟು ಕ್ರಿಕೆಟ್ ಆಡದಿದ್ದರೆ, ಟಿ-20 ಕ್ರಿಕೆಟ್​ನಲ್ಲಿ ಅಗತ್ಯವಾಗಿ ಬೇಕಾಗಿರುವ ವೇರಿಯೇಸನ್ಸ್​, ಸ್ಲೋ ಬಾಲ್​ ಡಿಲಿವರಿ, ಹಾಗೂ ಯಾರ್ಕರ್​ಗಳನ್ನು ಎಸೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಆದರೆ, ದಕ್ಷಿಣ ಆಫ್ರಿಕಾದವರೇ ಆದ ಕಗಿಸೋ ರಬಾಡ ಹಾಗೂ ಎನ್ರಿಚ್ ನೋಕಿಯಾ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ ಎಂದು ಕೇಳಿದ್ದಕ್ಕೆ, ರಬಾಡ 25 ವರ್ಷದ ಯುವ ಬೌಲರ್​ ಆಗಿದ್ದಾರೆ. 34-35 ವರ್ಷವಾದರೆ ಬೌಲಿಂಗ್ ಮಾಡುವುದು ಎಷ್ಟು ಕಷ್ಟ ಎಂಬುದನ್ನು ನಾನು ಅನುಭವಿಸಿದ್ದೇನೆ. ಸ್ಟೈನ್​ ಮುಂದೆ ಸಾಕಷ್ಟು ಕ್ರಿಕೆಟ್ ಇರುವುದರಿಂದ ಮುಂದಿನ ವರ್ಷದ ವೇಳೆಗೆ ಉತ್ತಮ ಪ್ರದರ್ಶನ ಕಂಡುಕೊಳ್ಳಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details