ಮೆಲ್ಬೋರ್ನ್: ಕ್ರಿಕೆಟ್ ಆಸ್ಟ್ರೇಲಿಯಾದ ನೂತನ ಸಿಇಒ ಆಗಿ ಪ್ರಸ್ತುತ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಸಿಇಒ ಆಗಿರುವ ಮಾಜಿ ವಿಕೆಟ್ ಕೀಪರ್ ನಿಕ್ ಹಾಕ್ಲೆ ಅವರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿದೆ.
ಕೊರೊನಾ ವೈರಸ್ ವ್ಯಾಪಕವಾಗಿದ್ದ ವೇಳೆ ಕ್ರಿಕೆಟ್ ಮಂಡಳಿಯನ್ನು ನಿರ್ವಹಿಸುವುದರಲ್ಲಿ ಹಲವು ಟೀಕೆಗಳನ್ನು ಎದುರಿಸಿದ ಬೆನ್ನಲ್ಲೇ ರಾಬರ್ಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಬರ್ಟ್ ರಾಜೀನಾಮೆ ನೀಡಿರುವ ವಿಚಾರವನ್ನು ಖಚಿತಪಡಿಸಿರುವ ಸಿಎ ಚೇರ್ಮನ್ ಅರ್ಲ್ಎಡ್ಡಿಂಗ್ಸ್, ಕ್ರಿಕೆಟ್ ಆಸ್ಟ್ರೇಲಿಯಾ ತೆರನಾಗಿರುವ ಸಿಇಒ ಸ್ಥಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುಡುಕಾಟ ನಡೆಸಲಿದ್ದೇವೆ. ಅಲ್ಲಿಯವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿರುವ ನಿಕ್ ಹಾಕ್ಲೆ ಅವರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
2018ರಲ್ಲಿ ಕಷ್ಟದ ವೇಳೆ ಮತ್ತು ಕೆಲವು ಸವಾಲಿನ ಸಂದರ್ಭಗಳಲ್ಲಿ ಕೆವಿನ್ ಕ್ರಿಕೆಟ್ ಮಂಡಳಿಯನ್ನು ದಣಿವರಿಯದೇ ನಿರ್ವಹಿಸಿದ್ದಾರೆ ಎಂದು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಆಗಿ ನಾನು ಪ್ರೀತಿಸುವ ಕ್ರೀಡೆಯನ್ನು ಮುನ್ನಡೆಸಲು ಮತ್ತು ಸೇವೆ ಸಲ್ಲಿಸಲು ಅವಕಾಶ ಲಭಿಸಿದ್ದು ನನ್ನ ಭಾಗ್ಯ. ನಮ್ಮ ಸಿಬ್ಬಂದಿ ಮತ್ತು ಆಟಗಾರರ ತಂಡವೂ ಹೆಚ್ಚಿನ ಕೊಡುಗೆ ನೀಡಿದೆ. ಈ ಸಾಧನೆಯನ್ನು ನಾವು ಒಟ್ಟಿಗೆ ಸಾಧಿಸಿದ್ದಕ್ಕೆ ಹೆಮ್ಮೆ ಪಡುತ್ತೇನೆ ಎಂದು ರಾಜೀನಾಮೆ ಬಳಿಕ ರಾಬರ್ಟ್ಸ್ ಹೇಳಿದ್ದಾರೆ.