ವೆಲ್ಲಿಂಗ್ಟನ್:ಕ್ರಿಕೆಟ್ ಇತಿಹಾಸದ ಮೊದಲ ಸಲಿಂಗ ವಿವಾಹವಾಗಿರುವ ನ್ಯೂಜಿಲ್ಯಾಂಡ್ನ ಆಮಿ ಸಟ್ಟರ್ತ್ವೈಟ್ ತಾವು ತಾಯಿಯಾಗುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ.
2010ರಿಂದ ಜೊತೆಯಾಗಿರುವ ಸಟ್ಟರ್ತ್ವೈಟ್ ಹಾಗೂ ಲೀ ತಾಹುಹು 2017ರಲ್ಲಿ ವಿವಾಹವಾಗಿದ್ದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಸಲಿಂಗ ವಿವಾಹವಾದ ಮೊದಲ ಜೋಡಿ ಎನಿಸಿಕೊಂಡಿದ್ದರು.
ಇದೀಗ 2 ವರ್ಷದ ನಂತರ ತಾವೂ ತಾಯಿಯಾಗುತ್ತಿರುವುದಾಗಿ ಆಮಿ ಇಂದು ಟ್ವಿಟರ್ನಲ್ಲಿ ಪ್ರಕಟಿಸಿಕೊಂಡಿದ್ದಾರೆ. ಇದಲ್ಲದೆ ನ್ಯೂಜಿಲ್ಯಾಂಡ್ ಹೊಸ ನಿಯಮದಂತೆ ಮೊದಲಬಾರಿಗೆ ಸಟರ್ತ್ವೈಟ್ ಹೆರಿಗೆ ರಜಾ ತೆಗೆದುಕೊಳ್ಳುತ್ತಿದ್ದಾರೆ. 2020 ಜನವರಿಯಿಂದ ಈ ಇಬ್ಬರು ಆಟಗಾರ್ತಿಯರು ರಜೆ ತೆಗೆದುಕೊಳ್ಳಲಿದ್ದಾರೆ. ನಂತರ 2021ರಟಿ20 ವಿಶ್ವಕಪ್ ವೇಳೆಗೆ ಮತ್ತೆ ತಂಡ ಸೇರಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ನ್ಯೂಜಿಲ್ಯಾಂಡ್ ಪರ 119 ಏಕದಿನ ಪಂದ್ಯ ಹಾಗೂ 99 ಟಿ20 ಪಂದ್ಯಗಳನ್ನಾಡಿರುವ ಆಮಿ ವಿಶ್ವ ಕ್ರಿಕೆಟ್ನಲ್ಲಿ ಸತತ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ.