ಮ್ಯಾಂಚೆಸ್ಟರ್:ಐಸಿಸಿ ಏಕದಿನ ವಿಶ್ವಕಪ್ನ ಮತ್ತೊಂದು ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವಿರೋಚಿತ ಸೋಲು ಕಂಡಿದ್ದು, ಪ್ರಸಕ್ತ ಸಾಲಿನ ವಿಶ್ವಕಪ್ ಮಹಾಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ಆರಂಭದಲ್ಲೇ ಡಬಲ್ ಅಘಾತದ ನಡುವೆ ಕೂಡ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ (148) ಭರ್ಜರಿ ಶತಕ, ಹಾಗೂ ರಾಸ್ ಟೇಲರ್(69)ರನ್ಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8ವಿಕೆಟ್ ಕಳೆದುಕೊಂಡು 291ರನ್ಗಳಿಕೆ ಮಾಡಿತು.
ಇದರ ಬೆನ್ನತ್ತಿದ್ದ ವೆಸ್ಟ್ ಇಂಡೀಸ್, ಶಾಯ್ ಹೋಪ್ (1) ಹಾಗೂ ನಿಕೋಲಸ್ ಪೂರನ್ (1) ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ ಗೇಲ್(87) ಹಾಗೂ ಹೆಟ್ಮಯರ್(54)ರನ್ಗಳ ಜೊತೆಯಾಟದೊಂದಿಗೆ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. 54ರನ್ಗಳಿಸಿದ ವೇಳೆ ಶಿಮ್ರಾನ್ ವಿಕೆಟ್ ಬಿಳುತ್ತಿದ್ದಂತೆ ತದನಂತರ ಬಂದ ಯಾವೊಬ್ಬ ಆಟಗಾರ ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೆ ಕೊನೆಯವರೆಗೂ ಏಕಾಂಕಿ ಹೋರಾಟ ನೀಡಿದ ಕಾರ್ಲಸ್ ಬ್ರಾತ್‌ವೇಟ್ ಶತಕ (101ರನ್)ಸಾಧನೆ ಮಾಡಿದರೂ ತಂಡವನ್ನ ಗೆಲುವಿನ ದಡ ಸೇರಿಸಲಿಲ್ಲ. ಕೊನೆಯ ಓವರ್ನಲ್ಲಿ ತಂಡಕ್ಕೆ 5ರನ್ ಬೇಕಿದ್ದ ವೇಳೆ ಸ್ಫೋಟಕ ಹೊಡೆತಕ್ಕೆ ಒಳಗಾಗಿ ವಿಕೆಟ್ ಒಪ್ಪಿಸಿದರು. ಸಿಕ್ಸರ್ ಲೈನ್ನಲ್ಲಿ ಬೌಲ್ಟ್ ಅದ್ಭುತ ಕ್ಯಾಚ್ ಪಡೆದುಕೊಂಡರು. ಇದರಿಂದ ತಂಡ 286 ರನ್‌ಗಳಿಗೆ ಆಲೌಟ್ ಆಗಿ, ರೋಚಕ ಸೋಲಿಗೆ ಶರಣಾಯಿತು.
ನ್ಯೂಜಿಲೆಂಡ್ ತಂಡದ ಪರ ಬೌಲಿಂಗ್ನಲ್ಲಿ ಮಿಂಚಿದ ಟ್ರೆಂಟ್ ಬೌಲ್ಟ್ 4ವಿಕೆಟ್ ಪಡೆದರೆ, ಲೂಕಿ ಫೆರ್ಗ್ಯೂಸನ್ 3ವಿಕೆಟ್ ಹಾಗೂ ಕಾಲಿನ್ ಗ್ರ್ಯಾಂಡ್ಹೋಮ್ ಹಾಗೂ ಹೆನ್ರಿ 1ವಿಕೆಟ್ ಪಡೆದುಕೊಂಡರು.
ಈ ಗೆಲುವಿನೊಂದಿಗೆ ನ್ಯೂಜಿಲ್ಯಾಂಡ್ ತಂಡ ಆಡಿರುವ ಆರು ಪಂದ್ಯಗಳಲ್ಲಿ 5 ಗೆಲುವು ಹಾಗೂ ಒಂದು ಪಂದ್ಯದಲ್ಲಿ(ಭಾರತ ವಿರುದ್ಧ) ಡ್ರಾದೊಂದಿಗೆ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದೆ. ಇನ್ನು ಆರು ಪಂದ್ಯಗಳಿಂದ ಕೇವಲ ಒಂದು ಪಂದ್ಯದಲ್ಲಿ ಗೆದ್ದು, ಮತ್ತೊಂದು ಡ್ರಾ ಹಾಗೂ ಉಳಿದ ಪಂದ್ಯ ಕೈಚೆಲ್ಲಿರುವ ವೆಸ್ಟ್ ಇಂಡೀಸ್ 7ನೇ ಸ್ಥಾನದಲ್ಲಿದ್ದು, ತಮ್ಮ ಸೆಮೀಸ್ ಕನಸು ಭಗ್ನಗೊಳಿಸಿಕೊಂಡಿದೆ.