ವೆಲ್ಲಿಂಗ್ಟನ್:ಇಲ್ಲಿನ ಸ್ಕೈ ಪಾರ್ಕ್ನಲ್ಲಿ ನ್ಯೂಜಿಲೆಂಡ್ ಮತ್ತು ಭಾರತದ ನಡುವೆ ನಾಲ್ಕನೇ ಟಿ-20 ಪಂದ್ಯ ನಡೆಯಲಿದ್ದು, ಕಿವೀಸ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದೆ.
ಇಂದಿನ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಮತ್ತು ರೋಹಿತ್ ಶರ್ಮಾ ಹೊರ ಉಳಿಯಲಿದ್ದಾರೆ. ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಕೊಹ್ಲಿ ಪಡೆ ಸರಣಿ ತನ್ನದಾಗಿಸಿಕೊಂಡಿದೆ.
ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಕಿವೀಸ್ ವಿರುದ್ಧ ಮೂರು ಪಂದ್ಯ ಗೆದ್ದು ಮುನ್ನುಗ್ಗಿದೆ. ಇಲ್ಲಿಯವರೆಗೆ ನ್ಯೂಜಿಲೆಂಡ್ನಲ್ಲಿ ಭಾರತ ಒಂದೇ ಒಂದು ಟಿ-20 ಸರಣಿ ಗೆದ್ದಿರಲಿಲ್ಲ. ನಾಯಕ ವಿಲಿಯಮ್ಸನ್ ಭುಜದ ನೋವಿನಿಂದ ಬಳಲುತ್ತಿದ್ದು, ತಂಡದಿಂದ ಹೊರ ಉಳಿದಿದ್ದಾರೆ. ಕಿವೀಸ್ ತಂಡಕ್ಕೆ ಟಿಮ್ ಸೌಥಿ ನಾಯಕರಾಗಿದ್ದು, ತಂಡದಲ್ಲಿ ಕೆಲವೊಂದು ಬದಲಾವಣೆಗಳಾಗಿವೆ.
ಇನ್ನು ಭಾರತ ತಂಡದಲ್ಲಿ ಉಪ ನಾಯಕ ರೋಹಿತ್ ಶರ್ಮಾೆ ಸೇರಿದಂತೆ ಜಡೇಜಾ ಮತ್ತು ಶೆಮಿಗೆ ರೆಸ್ಟ್ ನೀಡಲಾಗಿದೆ. ರೋಹಿತ್ ಶರ್ಮಾ ಬದಲಿಗೆ ಇಂದು ಆರಂಭಿಕ ಕೆ.ಎಲ್.ರಾಹುಲ್ ಜೊತೆ ಸಂಜು ಸ್ಯಾಮ್ಸನ್ ಕಣಕ್ಕಿಳಿಯಲಿದ್ದಾರೆ. ಶೆಮಿ ಮತ್ತು ಜಡೇಜಾ ಬದಲಿಗೆ ನವದೀಪ್ ಸೈನಿ ಹಾಗೂ ವಾಷಿಂಗ್ಟನ್ ಸುಂದರ್ ಆಡಲಿದ್ದಾರೆ.
ಆಟಗಾರರ ಪಟ್ಟಿ...
ಭಾರತ ತಂಡ:ಸಂಜು ಸ್ಯಾಮ್ಸನ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ನವದೀಪ್ ಸೈನಿ, ಯಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ.
ನ್ಯೂಜಿಲೆಂಡ್ ತಂಡ:ಮಾರ್ಟಿನ್ ಗುಪ್ಟಿಲ್, ಕಾಲಿನ್ ಮೂನ್ರೋ, ಟಿಮ್ ಸೌಥಿ (ನಾಯಕ), ಡೇನಿಲ್ ಮಿಚೆಲ್, ಟಾಮ್ ಬ್ರೂಸ್, ರಾಸ್ ಟೇಲರ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಸ್ಕಾಟ್ ಕುಗ್ಗೆಲೀಜ್ನ್, ಇಶ್ ಸೋಧಿ, ಹಮೀಶ್ ಬೆನೆಟ್.