ಹ್ಯಾಮಿಲ್ಟನ್: ಮೂರನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಬೃಹತ್ ಮೊತ್ತದ ಗುರಿಯನ್ನು ಕಿವೀಸ್ ತಂಡಕ್ಕೆ ನೀಡಿದೆ.
3ನೇ ಟಿ-20: ಭಾರತ ತಂಡಕ್ಕೆ ಆಸರೆಯಾದ ಹಿಟ್ಮ್ಯಾನ್, ಕಿವೀಸ್ಗೆ 180 ರನ್ಗಳ ಗುರಿ - ಕಿವೀಸ್ಗೆ 180 ರನ್ಗಳ ಗುರಿ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ಗೆ ರನ್ಗಳು ಕಲೆ ಹಾಕಿ ಕಿವೀಸ್ ತಂಡಕ್ಕೆ ಬೃಹತ್ ಮೊತ್ತ ನೀಡಿದೆ.
ಮೂರನೇ ಟಿ-20ಯಲ್ಲಿ ಮೊದಲ ಬ್ಯಾಟ್ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆತಿತ್ತು. ಆರಂಭಿಕ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಜೊತೆಗೂಡಿ 89 ರನ್ಗಳನ್ನು ಕಲೆ ಹಾಕಿದ್ದರು. ರನ್ ಗಳಿಸುವ ಅವಸರದಲ್ಲಿ ಗ್ರ್ಯಾಂಡ್‌ಹೋಮ್ ಬೌಲಿಂಗ್ಗೆ ಕೆ.ಎಲ್. ರಾಹುಲ್ ವಿಕೆಟ್ ಒಪ್ಪಿಸಿದರು. 65 ಗಳಿಸಿದ ರೋಹಿತ್ ಶರ್ಮಾ ಬೆನೆಟ್ಗೆ ವಿಕೆಟ್ ನೀಡಿ ಪೆವಿಲಿಯನ್ ಹಾದಿ ಹಿಡಿದರು.
ಇನ್ನು ನಾಯಕ ಕೊಹ್ಲಿ 38, ಶಿವಂ ದುಬೆ 3, ಶ್ರೇಯಸ್ ಅಯ್ಯರ್ 17 ರನ್ ಕಲೆ ಹಾಕಿದ್ದಾರೆ. ಮನೀಷ್ ಪಾಂಡೆ 14 ಹಾಗೂ ಜಡೇಜಾ 10 ರನ್ ಗಳಿಸಿ ಅಜೇಯರಾಗುಳಿದರು. ಒಟ್ಟಾರೆ ನಿಗದಿತ 20 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡು 179 ರನ್ಗಳನ್ನು ಕಲೆ ಹಾಕಿ ಕಿವೀಸ್ಗೆ 180 ರನ್ಗಳ ಗುರಿ ನೀಡಿದೆ.