ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ವಿರುದ್ಧ 4 ರನ್​ಗಳ ರೋಚಕ ಜಯ ಸಾಧಿಸಿದ ನ್ಯೂಜಿಲ್ಯಾಂಡ್

220 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 215 ರನ್ ​ಗಳಿಸಲಷ್ಟೇ ಶಕ್ತವಾಗಿ 4 ರನ್​ಗಳ ರೋಚಕ ಸೋಲು ಕಂಡಿತು.

ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲ್ಯಾಂಡ್​ಗೆ ಜಯ
ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲ್ಯಾಂಡ್​ಗೆ ಜಯ

By

Published : Feb 25, 2021, 3:05 PM IST

ಡುನೆಡಿನ್:​ ಗಪ್ಟಿಲ್(97)​ ಮತ್ತು ವಿಲಿಯಮ್ಸನ್(53)​ ಅವರ ಭರ್ಜರಿ ಅರ್ಧಶತಕ ಹಾಗೂ ಬೌಲರ್​ಗಳು ತೋರಿದ ಅದ್ಭುತ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ 2ನೇ ಟಿ-20 ಪಂದ್ಯದಲ್ಲೂ ನ್ಯೂಜಿಲ್ಯಾಂಡ್​​​​ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್​ ತಂಡ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 219 ರನ್​ಗಳ ಬೃಹತ್ ಮೊತ್ತ ಕಲೆಯಾಕಿತ್ತು. ಆರಂಭಿಕರಾದ ಮಾರ್ಟಿನ್ ಗಪ್ಟಿಲ್​ 50 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್​ಗಳ ನೆರವಿನಿಂದ 97 ರನ್ ​ಗಳಿಸಿದರೆ, ನಾಯಕ ವಿಲಿಯಮ್ಸನ್​ 35 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್​ ಸಹಿತ 53 ರನ್​ ಹಾಗೂ ಕೊನೆಯಲ್ಲಿ ಅಬ್ಬರಿಸಿದ ಆಲ್​ರೌಂಡರ್​ ಜಿಮ್ಮಿ ನೀಶಮ್​ 16 ಎಸೆತಗಳಲ್ಲಿ 1 ಬೌಂಡರಿ 6 ಸಿಕ್ಸರ್​ಗಳ ಸಹಿತ 45 ರನ್ ​ಗಳಿಸಿ ಬೃಹತ್ ಮೊತ್ತ ದಾಖಲಿಸಲು ನೆರವಾದರು.

ಆಸ್ಟ್ರೇಲಿಯಾ ಪರ ಕೇನ್​ ರಿಚರ್ಡ್ಸನ್​ 43ಕ್ಕೆ 3 ವಿಕೆಟ್​ ಪಡದರೆ, ಡೇನಿಯಲ್ ಸ್ಯಾಮ್ಸ್​ 46ಕ್ಕೆ 1, ಜಂಪಾ 43ಕ್ಕೆ 1, ಜೇ ರಿಚರ್ಡ್ಸನ್​ 39ಕ್ಕೆ 1 ವಿಕೆಟ್​ ಪಡೆದರು.

220 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 215 ರನ್ ​ಗಳಿಸಲಷ್ಟೇ ಶಕ್ತವಾಗಿ 4 ರನ್​ಗಳ ರೋಚಕ ಸೋಲು ಕಂಡಿತು. ಆರಂಭಿಕರಾದ ಆ್ಯರೋನ್ ಫಿಂಚ್​ (12), ಮ್ಯಾಕ್ಸ್​ವೆಲ್​(3), ಮಿಚೆಲ್ ಮಾರ್ಷ್​ ಶೂನ್ಯಕ್ಕೆ ಔಟಾಗಿದ್ದು ಆಸ್ಟ್ರೇಲಿಯಾದ ಸೋಲಿಗೆ ಕಾರಣವಾಯಿತು.

ಜೋಶ್​ ಫಿಲಿಪ್ಪೆ 32 ಎಸೆತಗಳಲ್ಲಿ 35, ಮಾರ್ಕಸ್ ಸ್ಟೋಯ್ನಿಸ್​ 37 ಎಸೆತಗಳಲ್ಲಿ 7 ಬೌಂಡರಿ 5 ಸಿಕ್ಸರ್​ ಸಹಿತ 78 ಮತ್ತು ಡೇನಿಯಲ್ ಸ್ಯಾಮ್ಸ್​ ಕೇವಲ 15 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್​ಗಳ ಸಹಿತ 42 ರನ್ ​ಗಳಿಸಿದರು.

ಕೊನೆಯ ಓವರ್​​ನಲ್ಲಿ ಗೆಲ್ಲಲು ಆಸ್ಟ್ರೇಲಿಯಾ ತಂಡಕ್ಕೆ 15 ರನ್​ಗಳ ಅವಶ್ಯಕತೆಯಿತ್ತು. ಸ್ಟೋಯ್ನಿಸ್​ ಮತ್ತು ಸ್ಯಾಮ್ಸ್​ ಇಬ್ಬರ ವಿಕೆಟ್​ ಕಳೆದುಕೊಂಡ ಆಸ್ಟ್ರೇಲಿಯಾ 10 ರನ್ ​ಗಳಿಸಿತು.

ನ್ಯೂಜಿಲ್ಯಾಂಡ್​ ಪರ ಮಿಚೆಲ್ ಸ್ಯಾಂಟ್ನರ್​ 31ಕ್ಕೆ 4, ಜಿಮ್ಮಿ ನೀಶಮ್​ 10ಕ್ಕೆ 2 ವಿಕೆಟ್​ ಪಡೆದರೆ, ಟಿಮ್ ಸೌಥಿ 47ಕ್ಕೆ 1 ಹಾಗೂ ಇಶ್​ ಸೋಧಿ 41ಕ್ಕೆ 1 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನು ಓದಿ:ವಿಜಯ್​ ಹಜಾರೆ ಟ್ರೋಫಿ: ಅಮೋಘ ದ್ವಿಶತಕ ಸಿಡಿಸಿ ದಾಖಲೆ ಸೃಷ್ಟಿಸಿದ ಪೃಥ್ವಿ ಶಾ!

ABOUT THE AUTHOR

...view details