ಹೈದರಾಬಾದ್: ನ್ಯೂಜಿಲೆಂಡ್ನ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಬ್ರೆಂಡನ್ ಮೆಕಲಂ ಕ್ರಿಕೆಟ್ಗೆ ಗುಡ್ಬೈ ಹೇಳಲು ಮುಂದಾಗಿದ್ದಾರೆ. ಮೆಕಲಂ ಇನ್ನು ಮುಂದೆ ಯಾವುದೇ ಟಿ-20 ಲೀಗ್ಗಳಲ್ಲೂ ಕೂಡ ಆಡುವುದಿಲ್ಲವಂತೆ.
ಸದ್ಯ ನಡೆಯುತ್ತಿರುವ ಗ್ಲೋಬಲ್ ಟಿ-20 ಕೆನಡಾ ಟೂರ್ನಿಯ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಹೇಳುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮೆಕಲಂರ 20 ವರ್ಷಗಳ ವೃತ್ತಿ ಬದುಕಿಗೆ ತೆರೆ ಬೀಳಲಿದೆ. 2016ರಲ್ಲೇ ಟೆಸ್ಟ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ್ದ ನ್ಯೂಜಿಲೆಂಡ್ ಮಾಜಿ ನಾಯಕ ಕೆಲ ಟಿ-20 ಲೀಗ್ಗಳಲ್ಲಿ ಮಾತ್ರ ಆಡುತ್ತಿದ್ದರು.
ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದ ಮೆಕಲಂ 2004ರಿಂದ ನ್ಯೂಜಿಲೆಂಡ್ ಪರ 101 ಟೆಸ್ಟ್, 260 ಏಕದಿನ ಮತ್ತು 71 ಟಿ-20 ಪಂದ್ಯಗಳನ್ನು ಆಡಿದ್ದರು. 20 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ತುಂಬಾ ಸಾಧನೆ ಮಾಡಿರುವ ಹೆಮ್ಮೆಯಿದೆ. ಇತ್ತೀಚೆಗೆ ಪ್ರದರ್ಶನದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಕಷ್ಟಕರವಾಗುತ್ತಿತ್ತು ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇನ್ನು 2008ರಲ್ಲಿ ಚೊಚ್ಚಲ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲೇ ಕೋಲ್ಕತ್ತಾ ಪರ ಆಡಿದ್ದ ಮೆಕಲಂ ಆರ್ಸಿಬಿ ವಿರುದ್ಧ 13 ಸಿಕ್ಸರ್ ಸಹಿತ 156 ರನ್ ಸಿಡಿಸಿ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದರು. ಬಳಿಕ ಅನೇಕ ಲೀಗ್ಗಳಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದಾರೆ.