ಕರ್ನಾಟಕ

karnataka

ETV Bharat / sports

ಮತ್ತೊಮ್ಮೆ ಟೀಂ ಇಂಡಿಯಾ ಕಾಡಿದ ರಾಸ್​ ಟೇಲರ್​... ಕೊಹ್ಲಿ ಪಡೆ ಗೆಲುವಿಗೆ 274 ರನ್​ ಟಾರ್ಗೆಟ್​​! - ರಾಸ್​ ಟೇಲರ್​​

ಉತ್ತಮ ಆರಂಭದ ಹೊರತಾಗಿ ಕೂಡ ಮಧ್ಯಮ ಕ್ರಮಾಂಕದಲ್ಲಿ ದಿಢೀರ್​ ಬ್ಯಾಟಿಂಗ್ ವೈಫಲ್ಯ ಕಂಡ ನ್ಯೂಜಿಲ್ಯಾಂಡ್​ ತಂಡಕ್ಕೆ ಮತ್ತೊಮ್ಮೆ ರಾಸ್​ ಟೇಲರ್​​ ಆಸರೆಯಾಗಿದ್ದು, ಟೀಂ ಇಂಡಿಯಾ ಗೆಲುವಿಗೆ ಸ್ಪರ್ಧಾತ್ಮಕ ಮೊತ್ತ ನೀಡಿದೆ.

India vs New Zealand
India vs New Zealand

By

Published : Feb 8, 2020, 11:30 AM IST

ಆಕ್ಲೆಂಡ್​:ಟೀಂ ಇಂಡಿಯಾ ಮಾರಕ ಬೌಲಿಂಗ್​ ದಾಳಿಗೆ ನ್ಯೂಜಿಲ್ಯಾಂಡ್​ ಬ್ಯಾಟಿಂಗ್​ ಪಡೆ ತತ್ತರಿಸಿದ್ರೂ, ಕೊಹ್ಲಿ ಪಡೆ ಬೌಲರ್​ಗಳ ಮೇಲೆ ರಾಸ್​ ಟೇಲರ್​ ಮತ್ತೊಮ್ಮೆ ಸವಾರಿ ಮಾಡಿದ್ದರಿಂದ ಕಿವೀಸ್​ ಪಡೆ ಸ್ಪರ್ಧಾತ್ಮಕ ರನ್​ ಸೇರಿಸುವಲ್ಲಿ ಯಶಸ್ವಿಯಾಗಿದೆ.

ಟೀಂ ಇಂಡಿಯಾ ಸಂಭ್ರಮ

ಬಾಲಂಗೋಚಿ ಜೆಮ್ಸನ್ ಅಜೇಯ (25)​ ಜೊತೆ ಸೇರಿ ಟೇಲರ್ ಅಜೇಯ(73)​​ ಅದ್ಬುತ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದು, ಕೊಹ್ಲಿ ಪಡೆ ಗೆಲುವಿಗೆ 274ರನ್​ಗಳ ಸ್ಪರ್ಧಾತ್ಮಕ ರನ್​ಗಳ ಟಾರ್ಗೆಟ್​ ನೀಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಕಿವೀಸ್​ ಪಡೆ ಉತ್ತಮ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ಗಪ್ಟಿಲ್​​-ಹೆನ್ರಿ ಜೋಡಿ ಮೊದಲ ಜೊತೆಯಾಟದಲ್ಲೇ 16.5 ಓವರ್​ಗಳಲ್ಲಿ 93ರನ್​ಗಳಿಕೆ ಮಾಡ್ತು.

ಯಜುವೇಂದ್ರ ಚಹಾಲ್​

41ರನ್​ಗಳಿಕೆ ಮಾಡಿದ್ದ ಹೆನ್ರಿ ಚಹಾಲ್​ ಓವರ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಇದಾದ ಬಳಿಕ ಬಂದ ಥಾಮ್​ ಬ್ಲಂಡೆಲ್​​ 22ರನ್​ಗಳಿಕೆ ಮಾಡಿದರು. ಇದಾದ ಬಳಿಕ ಮೈದಾನಕ್ಕೆ ಬಂದ ಯಾವೊಬ್ಬ ಆಟಗಾರ ಕೂಡ ಎರಡಂಕಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ. ಕ್ಯಾಪ್ಟನ್​ ಲಾಥಮ್​​ 7ರನ್​, ನೆಶಮ್​ 3, ಗ್ರ್ಯಾಂಡ್​ಹೋಮ್​​ 5, ಚ್ಯಾಪ್​ಮ್ಯಾನ್ 1, ಸೌಥಿ 3ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ವಿಕೆಟ್​ ಪತನದ ನಡುವೆ ಬ್ಯಾಟ್​ ಬೀಸಿದ ಟೇಲರ್​​ ರನ್​ಗಳಿಕೆ ಮಾಡಿ ತಂಡ 250ರ ಗಡಿ ದಾಟುವಂತೆ ಮಾಡಿದರು.

ಟೀಂ ಇಂಡಿಯಾ ಪ್ಲೇಯರ್ಸ್​

ಮುರಿಯದ 9ನೇ ವಿಕೆಟ್​ಗೆ ಜೊತೆಯಾದ ರಾಸ್ ಟೇಲರ್​​- ಜೆಮ್ಸನ್​​ 76 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಈ ವೇಳೆ ಟೇಲರ್​ 73ರನ್​ ಹಾಗೂ ಜೆಮ್ಸನ್​​ 25ರನ್​ಗಳಿಕೆ ಮಾಡಿದರು. ಹೀಗಾಗಿ ನ್ಯೂಜಿಲ್ಯಾಂಡ್​ ಕೊನೆಯದಾಗಿ 50 ಓವರ್​ಗಳಲ್ಲಿ 8 ವಿಕೆಟ್​ನಷ್ಟಕ್ಕೆ 273ರನ್​ಗಳಿಕೆ ಮಾಡಿದೆ.

ಟೀಂ ಇಂಡಿಯಾ ಪರ ಚಹಾಲ್​ 3 ವಿಕೆಟ್​, ಶಾರ್ದೂಲ್​ ಠಾಕೂರ್​ 2ವಿಕೆಟ್​​, ಜಡೇಜಾ 1ವಿಕೆಟ್​​ ಪಡೆದುಕೊಂಡರು. ಈಗಾಗಲೇ ನ್ಯೂಜಿಲ್ಯಾಂಡ್​ ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರಿಂದ ಟೀಂ ಇಂಡಿಯಾಗೆ ಈ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ABOUT THE AUTHOR

...view details