ಕರ್ನಾಟಕ

karnataka

ETV Bharat / sports

ಐಪಿಎಲ್​ 2020: ಯುಎಇಗೆ ಬಂದಿಳಿದ ನ್ಯೂಜಿಲ್ಯಾಂಡ್​ ಆಟಗಾರರು - m IPL 2020

ಕೋವಿಡ್​ 19 ಭೀತಿಯಿಂದ ನ್ಯೂಜಿಲ್ಯಾಂಡ್​ ಆಟಗಾರರು ಟೂರ್ನಿಯಿಂದ ಹಿಂದೆ ಸರಿಯಲಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ಅದೆಲ್ಲಾ ಊಹಾಪೋಹ ಎಂಬುದು ಕೊನೆಗೂ ಸಾಬೀತಾಗಿದೆ.

ಐಪಿಎಲ್​ 2020
ಐಪಿಎಲ್​ 2020

By

Published : Sep 3, 2020, 9:30 PM IST

ದುಬೈ:13ನೇ ಆವೃತ್ತಿಯ ಐಪಿಎಲ್​ಗೆ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್​ ವಿಲಿಯಮ್ಸ್​ ಸೇರಿದಂತೆ ಎಲ್ಲಾ ಆಟಗಾರರು ಯುಎಇ ತಲುಪಿದ್ದಾರೆ.

ಕೋವಿಡ್​ 19 ಭೀತಿಯಿಂದ ನ್ಯೂಜಿಲ್ಯಾಂಡ್​ ಆಟಗಾರರು ಟೂರ್ನಿಯಿಂದ ಹಿಂದೆ ಸರಿಯಲಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ಅದೆಲ್ಲಾ ಊಹಾಪೋಹ ಎಂಬುದು ಕೊನೆಗೂ ಸಾಬೀತಾಗಿದೆ.

ಕಿವೀಸ್​ ನಾಯಕ ವಿಲಿಯಮ್ಸನ್​ ಅವರು ಕಿಂಗ್ಸ್​ ಇಲೆವೆನ್​ ಪಂಜಾಬ್​ ಪರ ಆಡಲಿರುವ ಜಿಮ್ಮಿ ನಿಶಾಮ್​ ಜೊತೆ ಯುಎಇಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ. ಅಲ್ಲದೆ ಆರೆಂಜ್​ ಆರ್ಮಿಯನ್ನು ಸೇರಿಕೊಳ್ಳಲು ತಾವೂ ಎದುರು ನೋಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.

ಯುಎಇಗೂ ಬರುವ ಮುನ್ನ ಮಾತನಾಡಿರುವ ಅವರು, ಚೆನ್ನೈ ಸೂಪರ್ ಕಿಂಗ್ಸ್​ನ 13 ಸದಸ್ಯರಿಗೆ ಕೊರೊನಾ ಸೋಂಕು ತಗುಲಿರುವುದನ್ನು ಆತಂಕಕಾರಿ ವಿಚಾರ. ಅದಕ್ಕಾಗಿಯೇ ತಂಡಗಳನ್ನು ಬೇರೆ ಬೇರೆ ಹೋಟೆಲ್​ಗಳಲ್ಲಿ ಇರಿಸಿದ್ದಾರೆ. ಆದರೆ ಮತ್ತೊಂದು ಕ್ವಾರಂಟೈನ್​ ಮುಗಿಸಿ ಎಲ್ಲರೂ ನೆಗೆಟಿವ್​ ಪಡೆದು ಮರಳಲಿದ್ದಾರೆ ಎಂಬ ವಿಶ್ವಾಸವಿದೆ. ಈ ಸಂದರ್ಭದಲ್ಲಿ ಎಲ್ಲರೂ ಹೆಚ್ಚು ಜಾಗೃತರಾಗಿರಬೇಕು ಮತ್ತು ಶಿಸ್ತುಬದ್ಧವಾಗಿರಬೇಕು ಎಂದು ಅವರು ತಿಳಿಸಿದ್ದಾರೆ.

ಇನ್ನು ಮುಂಬೈ ಇಂಡಿಯನ್ಸ್​ ತಂಡದ ಟ್ರೆಂಟ್​ ಬೌಲ್ಟ್​ ಕೂಡ ಯುಎಇಗೆ ಬಂದಿಳಿದಿದ್ದಾರೆ.

ABOUT THE AUTHOR

...view details